ಇತ್ತೀಚೆಗೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚಾಗುತ್ತಿದ್ದು, ದಿಟ್ಟ ವಿದ್ಯಾರ್ಥಿನಿಯೋರ್ವಳು ಬೀದಿ ಕಾಮಣ್ಣನನ್ನು ನಡು ರಸ್ತೆಯಲ್ಲಿಯೇ ಥಳಿಸಿದ್ದಾಳೆ.
ಶಾಲಾ ಸಮವಸ್ತ್ರ ತೊಟ್ಟಿರುವ ಬಾಲಕಿಯೊಬ್ಬಳು ನಡು ರಸ್ತೆಯಲ್ಲೇ ಯುವಕನನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬಾಲಕಿ ಯವಕನಿಗೆ ಮನಬಂದಂತೆ ಬೆಲ್ಟ್ ನಿಂದ ಥಳಿಸುತ್ತಿರುವುದನ್ನು ಕಾಣಬಹುದು. ಯುವಕ ಕೆಲ ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಮನನೊಂದ ವಿದ್ಯಾರ್ಥಿನಿ ಯುವಕನಿಗೆ ನಡು ರಸ್ತೆಯಲ್ಲೇ ಥಳಿಸಿರುವುದಾಗಿ ವರದಿಯಾಗಿದೆ. ಈ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದೆ.
@gharkekalesh ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆಗಸ್ಟ್ 15ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಯುವಕ ನಡು ರಸ್ತೆಯಲ್ಲಿ ಬಿದ್ದಿದ್ದು, ಶಾಲಾ ಸಮವಸ್ತ್ರ ಧರಿಸಿಯೇ ಬಾಲಕಿ ಬೆಲ್ಟ್ ನಿಂದ ಹೊಡೆದಿದ್ದಾಳೆ. ಆತನ ನೀಚ ಕೃತ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲೈಂಗಿಕ ಕಿರುಕುಳ ನೀಡುವವರನ್ನು ಇದೇ ರೀತಿ ನಡು ರಸ್ತೆಯಲ್ಲೇ ಅವಮಾನಿಸಬೇಕು, ಮಹಿಳೆಯರು ಯಾವತ್ತೂ ಮಾನ ಮಾರ್ಯದೆಗೆ ಅಂಜಿ ಹಿಂಜರಿಯಬಾರದು ಎಂದು ಹಲವರು ಹೇಳುತ್ತಿದ್ದಾರೆ.


















