ಕೋಲಾರ: ಮನೆಯಲ್ಲಿ ಇದ್ದಾಗಲೇ ಶಿಕ್ಷಕಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೂವರು ಹಂತಕರು ಶಿಕ್ಷಕಿಯ (teacher) ಕತ್ತು ಕೊಯ್ದು ಬರ್ಬರವಾಗಿ ಕೊಲೆ (murder) ಮಾಡಿರುವ ಘಟನೆ ಜಿಲ್ಲೆಯ ಮುಳಬಾಗಿಲಿನ ಮುತ್ಯಾಲಪೇಟೆ ಲೇಔಟ್ ನಲ್ಲಿ ನಡೆದಿದೆ.
ದಿವ್ಯಶ್ರೀ (42) ಕೊಲೆಯಾದ ಶಿಕ್ಷಕಿ. ಮನೆಯಲ್ಲಿ ಮಗಳ ಜೊತೆ ಇದ್ದ ಸಂದರ್ಭದಲ್ಲಿಯೇ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಈ ವೇಳೆ ಮಗಳನ್ನೂ ಹತ್ಯೆಗೈಯಲು ಯತ್ನಿಸಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್.ಬಿ, ಎಫ್ಎಸ್ಎಲ್ ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದೆ.
ಮೃತ ದಿವ್ಯಶ್ರೀ ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿ ಪದ್ಮನಾಭ್ ಉದ್ಯಮಿ ಆಗಿದ್ದಾರೆ ಎನ್ನಲಾಗಿದೆ. ಶಿಕ್ಷಕಿ ಕೊಲೆಯಿಂದ ಮುಳಬಾಗಿಲು ಜನರು ಬೆಚ್ಚಿಬಿದಿದ್ದಾರೆ. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕೂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.