ಮೈಸೂರು: ಮೊದಲಿನ ಸಿದ್ದರಾಮಯ್ಯ ಆಗಿ ನಾನು ಇರುವುದಿಲ್ಲ. ಇನ್ನು ಮುಂದೆ ನಾನು ಬದಲಾಗುತ್ತೇನೆ. ಆದರೆ, ಯಾವಾಗಲೂ ಪ್ರಮಾಣಿಕನಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳ ಯಾವ ನಾಯಕರ ಮೇಲೂ ಕರುಣೆ ತೋರುವುದಿಲ್ಲ. ಎಲ್ಲ ವಿಪಕ್ಷ ನಾಯಕರ ಬಗ್ಗೆ ನಾನು ಪಾಪ ಹೋಗ್ಲಿ ಬಿಡು, ಹೋಗ್ಲಿ ಬಿಡು ಅಂತ ಅಂತಿದ್ದೆ. ಆದರೆ, ಅದೇ ನನಗೆ ಈಗ ಮುಳುವಾಗುತ್ತಿದೆ. ವಿಪಕ್ಷಗಳ ಎಲ್ಲಾ ನಾಯಕರ ಹಳೇ ಕತೆಗಳನ್ನು ಒಂದೊಂದಾಗಿ ಓಪನ್ ಮಾಡುತ್ತೇನೆ. ದ್ವೇಷದ ರಾಜಕಾರಣ ಅಂದರೂ ಪರವಾಗಿಲ್ಲ. ನಾನು ಇನ್ಮುಂದೆ ಡೋಂಟ್ ಕೇರ್ ಎನ್ನುತ್ತೇನೆ ಎಂದು ವಿಪಕ್ಷಗಳ ಸಿಎಂ ಆಕ್ರೋಶ ಭರಿತವಾಗಿ ಹೇಳಿದ್ದಾರೆ.
ತಪ್ಪೇ ಮಾಡದ ನನ್ನ ಮೇಲೆ ಬೀದಿ ಬೀದಿ ಸುತ್ತಿಕೊಂಡು ಸುಳ್ಳು ಹಬ್ಬಿಸಿ, ನನ್ನ ಹೆಸರು ಕೆಡಿಸುತ್ತಿದ್ದಾರೆ. ಈ ವಿಚಾರದಲ್ಲಿ ನಾನಿನ್ನು ತಾಳ್ಮೆಯಿಂದ ಇರುವುದಿಲ್ಲ. ಯಾರೇ ಬಂದು ಏನೇ ಒತ್ತಡ ಹೇರಿದರೂ ನಾನು ಇನ್ನು ಮುಂದೆ ವಿಪಕ್ಷಗಳ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.