ಬೆಳಗಾವಿ: ಕಾರ್ಖಾನೆಯಲ್ಲಿ ಉಂಟಾದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಒಟ್ಟ 18 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಯಲ್ಲಪ್ಪ ಎಂಬ ಯುವಕ ಘಟನೆಯಲ್ಲಿ ಸುಟ್ಟು ಕರಕಲಾಗಿದ್ದ. ಆ.6ರಂದು ಜಿಲ್ಲೆಯ ನಾವಗೆ ಬಳಿಯ ಸ್ನೇಹಂ ಟೇಪಿಂಗ್ ಕಾರ್ಖಾನೆಯಲ್ಲಿ ನಡೆದಿದ್ದ ದುರ್ಘಟಯಲ್ಲಿ ಲಿಫ್ಟ್‌ನಲ್ಲಿ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ ಸಜೀವ ದಹನವಾಗಿದ್ದ. ಈಗ ಕಾರ್ಖಾನೆ ಆಡಳಿತ ಮಂಡಳಿ 18 ಲಕ್ಷ ರೂ. ಪರಿಹಾರ ನೀಡಿದೆ.
18 ಲಕ್ಷ ರೂ. ಪರಿಹಾರದ ಚೆಕ್ ನ್ನು ಆಡಳಿತ ಮಂಡಳಿ ತಂದೆ ಸಣ್ಣಯಲ್ಲಪ್ಪ, ತಾಯಿ ಬಸವ್ವ ಹೆಸರಿನಲ್ಲಿ ನೀಡಿದೆ. ಮನೆಯ ಜವಾಬ್ದಾರಿಯನ್ನು ತನ್ನ ಮೇಲೆ ಹೊತ್ತು ಅಕ್ಕನ ಮದುವೆ ಮಾಡಿ ಇನ್ನಿಬ್ಬರ ಸಹೋದರಿಯರ ಓದಿನ ಜವಾಬ್ದಾರಿಯನ್ನೂ ತಡಗೆದುಕೊಂಡು ಕೆಲಸಕ್ಕೆ ಸೇರಿದ್ದ. ಮಂಗಳವಾರ ಸಂಜೆ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿಯಲ್ಲಿ ಸಜೀವವಾಗಿ ಯಲ್ಲಪ್ಪ ಬೆಂದು ಹೋಗಿದ್ದ. ಬೆಂಕಿಯ ಕೆನ್ನಾಲಿಗೆಗೆ ಯಲ್ಲಪ್ಪನ ದೇಹ ಸಂಪೂರ್ಣ ಸುಟ್ಟು ಕರಕಲಾಗಿ ಕೇವಲ ಮೂಳೆಗಳು ಮಾತ್ರ ಸಿಕ್ಕಿದ್ದವು. ಲಿಫ್ಟ್ ಒಳಭಾಗದಲ್ಲಿ ಸಿಲುಕಿದ್ದ ಯಲ್ಲಪ್ಪ ಹೀನಾಯವಾಗಿ ಸಾವನ್ನಪ್ಪಿದ್ದ.