ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಈ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ. 50 ವರ್ಷ ವಯಸ್ಸಿನ ಗಂಗುಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಕ್ಯಾಂಪ್ ನಲ್ಲಿರುವ ಯುವನೋರ್ವನ ಮೇಲೆ ದಾಳಿ ಮಾಡಿತ್ತು. ಬೆಕ್ಕು ಎರಡು ತಿಂಗಳ ಹಿಂದೆ ಮಹಿಳೆಗೆ ಕಚ್ಚಿತ್ತು. ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ.
ಇದು ಮೊದಲು ತರಲಘಟ್ಟದ ಕ್ಯಾಂಪ್ ನಲ್ಲಿರುವ ಯುವನೋರ್ವನ ಮೇಲೆ ದಾಳಿ ಮಾಡಿತ್ತು. ಮಹಿಳೆಯ ಮೇಲೆ ದಾಳಿ ಮಾಡಿತ್ತು. ಮಹಿಳೆ ಕಾಲಿಗೆ ಕಚ್ಚಿದ ಕಾರಣ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಒಂದು ಇಂಜೆಕ್ಷನ್ ಪಡೆದ ನಂತರ ಅರಾಮಾಗಿದ್ದಳು. ಆನಂತರ ಇಂಜೆಕ್ಷನ್ ಪಡೆಯದೆ ಸುಮ್ಮನಾಗಿದ್ದಳು. ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕೆ ನಿರ್ಲಕ್ಷ ಮಾಡಿದ್ದಳು. ಆನಂತರ ಬೆಕ್ಕು ಕಚ್ಚಿದ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಶುರುವಾಗಿತ್ತು. ದೇಹದಲ್ಲಿ ನಂಜು ಏರುತ್ತಲೇ ಹೋಗಿತ್ತು. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆಯಲ್ಲಿ ಮಹಿಳೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಈ ಬೆಕ್ಕು ಯಜಮಾನಿಯನ್ನು ಕಚ್ಚುವ ಮುನ್ನ ಬೆಕ್ಕು ನಾಯಿಯ ಮರಿಯನ್ನು ಕಚ್ಚಿತ್ತು. ಅಲ್ಲದೇ ಈ ಬೆಕ್ಕು ತರಲಘಟ್ಟದ ಕ್ಯಾಂಪ್ ನಲ್ಲಿ ಯುವನೋರ್ವನ ಮೇಲೆ ದಾಳಿ ನಡೆಸಿ ಕಾಲಿಗೆ ಕಚ್ಚಿತ್ತು. ಆದರೆ, ಯುವಕ ಸೂಕ್ತ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಮಹಿಳೆ ಮಾತ್ರ ಒಂದೇ ಒಂದು ಇಂಜೆಕ್ಷನ್ ಪಡೆದು ನಿರ್ಲಕ್ಷ್ಯ ಮಾಡಿದ್ದಕ್ಕೆ ಸಾವನ್ನಪ್ಪಿದ್ದಾರೆ.
ಯಜಮಾನಿಯನ್ನು ಕಚ್ಚುವುದಕ್ಕೂ ಮುನ್ನ ಬೆಕ್ಕು ನಾಯಿಯ ಮರಿಯನ್ನ ಕಚ್ಚಿತ್ತು. ಈ ನಾಯಿ ಮರಿ ಕೂಡ ಸಾವನ್ನಪ್ಪಿತ್ತು ಎನ್ನಲಾಗಿದೆ. ಆದರೆ, ಈಗ ಬೆಕ್ಕು ಎಲ್ಲಿಗೊ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.