ಮದುವೆಯಾಗುವ ಹುಡುಗ- ಹುಡುಗಿಯ ಮಧ್ಯೆ ಅಬ್ಬಬ್ಬಾ ಅಂದ್ರೆ 10 ವರ್ಷ ಹೆಚ್ಚಿದ್ದರೂ ಜಾಸ್ತಿ ಅಂತಾ ಹೇಳ್ತಾರೆ. ಆದರೆ, ಇಲ್ಲಿ 20 ವರ್ಷದ ಯುವತಿಗೆ 69 ವರ್ಷದ ವೃದ್ಧ ವರನೊಂದಿಗೆ ಮದುವೆ ಮಾಡಲು ಮುಂದಾಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಆದರೆ, 20 ವರ್ಷದ ಹುಡುಗಿ ಮಾತ್ರ 69 ವರ್ಷದ ವರನ ಕಂಡು ತಲೆ ತಿರುಗಿ ಬಿದ್ದಿದ್ದಾಳೆ. ಮನೆಯವರೆಲ್ಲರೂ ಸೇರಿ 20 ವರ್ಷದ ವಧುವಿಗೆ 69 ವರ್ಷದ ಮುದುಕನೊಂದಿಗೆ ವಿವಾಹ ಮಾಡಲು ಮುಂದಾಗಿದ್ದು, ಆತನ ಮುಖ ನೋಡುತ್ತಿದ್ದಂತೆ ವಧು ಮೂರ್ಚೆ ಬಿದ್ದಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಈ ಕುರಿತ ಪೋಸ್ಟ್ ನ್ನು Incognito_qfs ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “20 ವರ್ಷದ ಮುಸ್ಲಿಂ ವಧು 69 ವರ್ಷದ ವರನ ಮುಖವನ್ನು ನೋಡಿ ಮೂರ್ಚೆ ಹೋಗಿದ್ದಾಳೆ ಎಂದು ಶೀರ್ಷಿಕೆ ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಮನೆಯವರೆಲ್ಲರೂ ಯುವತಿಗೆ ವರನ ಮುಖವನ್ನು ತೋರಿಸದೆ. ಸಿಂಪಲ್ ಆಗಿ ಮದುವೆ ನೆರವೇರಿಸಿದ ದೃಶ್ಯವನ್ನು ಕಾಣಬಹುದು. ಹೀಗೆ ಮದುವೆಯಾದ ನಂತರ ವರನ ಮುಖ ತೋರಿಸುತ್ತಿದ್ದಂತೆ, ವಧು ಮೊದಲ ಬಾರಿಗೆ ತನ್ನ ಪತಿರಾಯನ ಮುಖ ನೋಡಿ ಮೂರ್ಚೆ ಹೋಗಿದ್ದಾಳೆ.
ಆದರೆ, ನೆಟ್ಟಿಗರು ಮಾತ್ರ ಮೊದಲೇ ಹುಡುಗನ ಮುಖವನ್ನು ನೋಡದೆ ಅವಳೇಕೆ ಮದುವೆಗೆ ಒಪ್ಪಿದಳು ಎಂದು ಪ್ರಶ್ನಿಸಿದ್ದಾರೆ.