ದೆಹಲಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭೆ ಸದಸ್ಯರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಸಂಸತ್ ಭವನದಲ್ಲಿರುವ ಕೇಂದ್ರ ಸಚಿವ HD ಕುಮಾರಸ್ವಾಮಿಯವರ ಕಚೇರಿಗೆ ಇಂದು ಭೇಟಿ ನೀಡಿ ಮಾತುಕತೆ ನಡೆಸಿದರು. ಸ್ವಾಭಾವಿಕ ಭೇಟಿ ಎಂಬರ್ಥದಲ್ಲೇ ಕಚೇರಿಗೆ ಆಗಮಿಸಿದ ಹೆಗ್ಗಡೆಯವರನ್ನು ಗೌರವಪೂರ್ಣವಾಗಿ ಸ್ವಾಗತಿಸಿದ ಕುಮಾರಸ್ವಾಮಿ ಕೃತಜ್ಞತಾ ಭಾವದಲ್ಲಿ ಆತಿಥ್ಯ ಮಾಡಿದರು.

ರಾಜ್ಯದ ಘಟಾನುಘಟಿಗಳಿಬ್ಬರು ದೆಹಲಿ ಸಂಸತ್ ಭವನದಲ್ಲಿ ಉಭಯ ಕುಶಲೋಪರಿ ನಡೆಸಿದ್ದು ಕುತೂಹಲದ ಜೊತೆ ವಿಶೇಷವಾಗಿತ್ತು. ಸಹಜ ಮಾತಿನೊಂದಿಗೆ ಆರಂಭವಾದ ಮಾತುಕತೆಯು, ರಾಜ್ಯದ ಸದ್ಯದ ಆಗ-ಹೋಗುಗಳ ಬಗೆಗೂ ವಿಷಯ ಸಾಗಿತ್ತು. ಎಂದಿನಂತೆ ಹೆಗ್ಗಡೆಯವರ ಅಭಿವೃದ್ಧಿ ಎಡೆಗಿನ ತಮ್ಮ ಚಿಂತನೆ ತೆರೆದಿಟ್ಟರು. ಅಂತೆಯೇ ಇಬ್ಬರೂ ಸೇರಿ ರಾಜ್ಯದ ಒಳಿತುಗಳೆಡೆಗೆ ಪರಸ್ಪರ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ಮೇಲ್ನೋಟಕ್ಕೆ ಇದು ಔಪಚಾರಿಕ ಭೇಟಿ ಅನಿಸಿದರೂ, ಸಹಜವಾಗಿಯೇ ಅಲ್ಲೊಂದು ನಮ್ಮ ರಾಜ್ಯದೆಡೆಗಿನ ಅಭಿವೃದ್ಧಿ ಮಂತ್ರ ಪಠಣವಾಗಿದೆ.
