ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇಹಲೋಕ ತ್ಯಜಿಸಿ ಆಗಸ್ಟ್ 6ಕ್ಕೆ ಒಂದು ವರ್ಷ ಕಳೆದಿವೆ. ಅವರನ್ನು ಮರೆಯಲು ವಿಜಯ್ ರಾಘವೇಂದ್ರ ತುಂಬಾ ಒದ್ದಾಡುತ್ತಿದ್ದಾರೆ.
ನಟ ವಿಜಯ್ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪತ್ನಿಯ ಪೋಟೋ ಹಂಚಿಕೊಂಡು ನೆನಪು ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಈ ಮೂಲಕ ಅವರು ಪತ್ನಿ ಬಗ್ಗೆ ಇರುವ ಭಾವನೆ ತೋರ್ಪಡಿಸುತ್ತಿರುತ್ತಾರೆ. ಇಂದು ಸ್ಪಂದನಾ ಅವರ ಮೊದಲ ವರ್ಷದ ಪುಣ್ಯತಿಥಿ. ಹೀಗಾಗಿ ವಿಜಯ್ ರಾಘವೇಂದ್ರ ಪತ್ನಿಯ ಫೋಟೋ ಹಂಚಿಕೊಂಡು ಭಾವುಕರಾಗಿ ಸಂದೇಶ ಹಾಕಿದ್ದಾರೆ. ಫೋಟೋಗೆ, ‘ಚಿನ್ನ, ಮೌನದಲ್ಲಿ ಅರಳಿದ ನಗು ನಿನ್ನದು. ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು’ ಎಂದು ಬರೆದುಕೊಂಡಿದ್ದಾರೆ.
ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಹಲವಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಸ್ಪಂದನಾ ಬ್ಯಾಂಕಾಕ್ ಗೆ ತೆರಳಿದ್ದ ಸಂದರ್ಭದಲ್ಲಿ ನಿಧನರಾಗಿದ್ದರು. ಕಡಿಮೆ ರಕ್ತದೊತ್ತಡದಿಂದ ಅವರು ಸಾವನ್ನಪ್ಪಿದ್ದಾರೆಂದು ಹಲವರು ಹೇಳಿದರೆ, ಇನ್ನೂ ಹಲವರು ಹೃದಯಾಘಾತ ಎನ್ನುತ್ತಿದ್ದಾರೆ.