ಇಂದಿನಿಂದ ಶ್ರಾವಣ ಸೋಮವಾರ ಆರಂಭವಾಗಿದ್ದು, ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿರುತ್ತವೆ. ಹೀಗೆ ಬಿಹಾರದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ವಿದ್ಯುತ್ ಸ್ಪರ್ಶಿಸಿ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶ್ರಾವಣ ಸೋಮವಾರವಾಗಿರುವುದರಿಂದ ಕನ್ವಾರಿಯಾಗಳು ನೀರು ತರಲು ನದಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ 11 ಸಾವಿರ ವೋಲ್ಟ್ ವಿದ್ಯುತ್ ತಂತಿಗೆ ಟ್ರಾಲಿ ತಾಗಿದ್ದು 9 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಹೇಲಜಾ ಘಾಟ್ ನಿಂದ ನೀರು ತೆಗೆದುಕೊಂಡು ಬಾಬಾ ಹರಿಹರನಾಥ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಡಿಜೆ ಟ್ರಾಲಿಗೆ ಹೈ ಟೆನ್ಷನ್ ವೈರ್ ಸ್ಪರ್ಶಿಸಿದೆ. ಹೀಗಾಗಿ 9 ಜನ ಬಲಿಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿಜೆಯಲ್ಲಿ ಹಾಡು ಹಾಕಿಕೊಂಡು ಎಲ್ಲರೂ ನೃತ್ಯ ಮಾಡುತ್ತಾ ನೀರು ತರಲೆಂದು ತೆರಳುತ್ತಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಬಿಹಾರದಲ್ಲಿ ಈ ರೀತಿಯ ಪದ್ಧತಿ ಆಚರಿಸುತ್ತಾರೆ.