ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದು, ಎನ್ನಲಾಗಿರುವ ವಿಡಿಯೋಗಳು ನಕಲಿ ಎನ್ನಲಾಗಿತ್ತು. ಆದರೆ, ಇವು ಅಸಲಿ ಎನ್ನಲಾಗಿದೆ. ಆದರೆ, ವಿಡಿಯೋದಲ್ಲಿನ ವ್ಯಕ್ತಿಯೇ ಅರೆಸ್ಟ್ ಆದವರಾ? ಎಂಬ ವರದಿ ಮಾತ್ರ ಇನ್ನೂ ಬಂದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋಗಳು ಎಡಿಟ್ ಎಂದು ಹೇಳಲಾಗಿತ್ತು. ಆದರೆ, ಸದ್ಯ ಎಫ್ ಎಸ್ ಎಲ್ ವರದಿ ಬಂದಿದ್ದು, ಆ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ವರದಿಯಲ್ಲಿ ಬಹಿರಂಗವಾಗಿದೆ. ವಿಡಿಯೋಗಳು ಯಾವುದೇ ಅನಿಮೇಷನ್, ಗ್ರಾಫಿಕ್ಸ್, ಎಡಿಟ್, ಮಾರ್ಫ್ ಮಾಡಿದ್ದಲ್ಲ. ಅವು ಅಸಲಿ ವಿಡಿಯೋಗಳು ಎಂದು ಎಫ್ ಎಸ್ ಎಲ್ ವರದಿ ಹೇಳಿದೆ. ಈ ವರದಿ ಈಗ ಪ್ರಜ್ವಲ್ ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ಈ ವಿಡಿಯೋಗಳು ನಕಲಿ ಎಂದಿದ್ದರು. ವಿರೋಧಿಗಳು ಎಡಿಟ್, ಮಾರ್ಫಿಂಗ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಹೀಗಾಗಿ ಎಸ್ ಐಟಿ ವಿಡಿಯೋಗಳ ಅಸಲಿ ವಿಷಯ ತಿಳಿಯುವುದಕ್ಕಾಗಿ ಎಫ್ ಎಸ್ ಎಲ್ ಗೆ ಕಳುಹಿಸಿತ್ತು. ಇದೀಗ ವರದಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಅಶ್ಲೀಲ ವಿಡಿಯೋ ಅಸಲಿ ಎಂಬುವುದು ಸಾಬೀತಾಗಿದೆ. ಆದರೆ, ವಿಡಿಯೋದಲ್ಲಿನ ವ್ಯಕ್ತಿಗೂ, ಬಂಧಿತ ಆರೋಪಿಯೇ ಎಂಬುವುದು ಮಾತ್ರ ಸಾಬೀತಾಗಿಲ್ಲ. ಈ ಕುರಿತ ವರದಿ ಈಗಷ್ಟೇ ಬರಬೇಕಿದೆ.