ಮೈಸೂರು: ಮಹಾಮಳೆಯಿಂದಾಗಿ ವಯನಾಡಿನಲ್ಲಿ ನಡೆದ ಗುಡ್ಡ ಕುಸಿತ (Wayanad Landslide) ದುರಂತದಲ್ಲಿ ನೂರಾರು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಕೇರಳದ ಈ ದುರಂತದಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿದ್ದಾರೆ.
ಜೀವನ ಕಟ್ಟಿಕೊಳ್ಳುವುದಕ್ಕಾಗಿ ಹುಟ್ಟೂರು ಬಿಟ್ಟು ವಯನಾಡಿನಲ್ಲಿ ನೆಲೆಸಿದ್ದ ಮೂವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್ನೂ 9 ಜನ ನಾಪತ್ತೆಯಾಗಿದ್ದಾರೆ. ಹೀಗಾಗಿ ಇತ್ತ ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ನಿವಾಸಿ ಮಾದೇವಿ ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ದೂರವಾಣಿ ಮೂಲಕ ತಮ್ಮ ಮಕ್ಕಳ ಧಾರುಣ ಅಂತ್ಯದ ಬಗ್ಗೆ ವಿವರಿಸುತ್ತ ಕಣ್ಣೀರು ಹಾಕಿದ್ದು, ಸಿಎಂ ಸಾಂತ್ವನ ಹೇಳಿದ್ದಾರೆ.
ಕೇರಳದ ವಯನಾಡಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 300 ಗಡಿಯತ್ತ ಸಾಗಿದೆ. ಈ ಪೈಕಿ ರಾಜ್ಯದ ಮೂವರಿದ್ದಾರೆ. ಇನ್ನೂ 9 ಜನ ಸಿಗಬೇಕಿದೆ. ಅವರು ಹೇಗಾದರೂ ಬದುಕುಳಿಯಲಿ ಎಂದು ಎಲ್ಲರೂ ಮನವಿ ಮಾಡುತ್ತಿದ್ದಾರೆ. ಅಲ್ಲದೇ, 10 ಜನ ಕನ್ನಡಿಗರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹೀಗಾಗಿಯೇ ವಯನಾಡಿನ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟ ಹಾಗೂ ನಾಪತ್ತೆಯಾದ ಕನ್ನಡಿಗರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ, ಮಂಡ್ಯ ನಿವಾಸಿ ಚೈತ್ರ ಎಂಬುವವರಿಗೆ ಸಿಎಂ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಮೃತ ದೇಹಗಳನ್ನ ಪತ್ತೆ ಹಚ್ಚಲು ಕಷ್ಟವಾಗುತ್ತಿದೆ. ಅಧಿಕಾರಿಗಳನ್ನ ಕಳುಹಿಸಿಕೊಟ್ಟಿದ್ದೇನೆ. ನಿಮಗೆ ಸಹಾಯ ಮಾಡುತ್ತಾರೆ ಎಂದ ಸಿಎಂ ಸಾಂತ್ವಾನ ಹೇಳಿದ್ದು, ನಮಗೆ ಪರಿಹಾರ ಕೊಡಿಸಿ ಎಂದ ಸಂತ್ರಸ್ಥರು ಮನವಿ ಮಾಡಿದ್ದಾರೆ.
ವಯನಾಡಿನ ಗುಡ್ಡ ಕುಸಿತ ಪ್ರಕರಣದಲ್ಲಿ ಮೈಸೂರಿನ ಟಿ.ನರಸೀಪುರದ ಮೂವರು ಸಾವನ್ನಪ್ಪಿದ್ದು, 9 ಜನ ನಾಪತ್ತೆಯಾಗಿದ್ದಾರೆ. ರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ನಿವಾಸಿಗಳಾದ ಸಾವಿತ್ರಿ, ಅಚ್ಚು, ಶ್ರೀಕುಟ್ಟಿ ಸಾವನ್ನಪ್ಪಿದ್ದಾರೆ. ಗುರುಮಲ್ಲ, ಸಾವಿತ್ರಿ, ಸಬೀತಾ, ಶಿವಣ್ಣ, ಅಪ್ಪಣ್ಣ, ಅಶ್ವಿನಿ, ಜಿತು, ದಿವ್ಯ, ರತ್ನ ನಾಪತ್ತೆಯಾಗಿರುವ ದುರ್ದೈವಿಗಳು.