ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮಾತನಾಡಿದ ಅವರು, ಸರ್ಕಾರದ ಹತ್ತಿರ ಗ್ಯಾರಂಟಿಗಳನ್ನು ಈಡೇರಿಸಲು ಹಣ ಇಲ್ಲ. ಆದರೂ ಅವರು ಗ್ಯಾರಂಟಿಯನ್ನು ಮುಂದುವರಿಸಲು ಸಾಲ ಮಾಡಬೇಕಿದೆ. ಮಹಿಳೆಯರಿಗೆ 2 ಸಾವಿರ ರೂ. ನೀಡದೆ 3 ತಿಂಗಳು ಆಗಿದೆ. ಸಚಿವೆ ಹಾಗೂ ಭಾಗ್ಯದ ಲಕ್ಷ್ಮಿಗೆ ಬೆಳಗಾವಿಯಲ್ಲಿಯೇ ಮಹಿಳೆಯೊಬ್ಬರು ದುಡ್ಡು ಕೊಡಲ್ವಾ ಅಂತ ಕೇಳಿದರೆ, ಮನೆಗೆ ಹೋಗು ಅಂತ ಗದರಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಅಂದರೆ, ತಮ್ಮದೇ ಪಕ್ಷದ ಪಾದಯಾತ್ರೆ ವಿರೋಧಿಸಿ ಮಾತನಾಡಿದ್ದಾರೆ.