ಮಗನ ಹತ್ಯೆಯ ಆರೋಪಿ ದರ್ಶನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ರೇಣುಕಾಸ್ವಾಮಿ ತಂದೆ ಹೇಳಿದ್ದಾರೆ.
ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಈ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ತಾವು ಸಂಧಾನ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮುಂದೊಂದು ದಿನ ದರ್ಶನ್ ಭೇಟಿಗೆ ಬರಲಿ ಎಂದು ಬಯಸುವುದಿಲ್ಲ ಎಂದಿದ್ದಾರೆ.
ಕಾಶಿನಾಥಯ್ಯ ಶಿವನಗೌಡ ಅವರು ಇತ್ತೀಜೆಗೆ ದರ್ಶನ್ ನಮ್ಮ ಭೇಟಿಗೆ ಬರಲಿ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಹಲವರು ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಶಿನಾಥಯ್ಯ, ನಮ್ಮ ಭೇಟಿಗೆ ದರ್ಶನ್ ಬರಲಿ ಎಂಬ ಅರ್ಥದಲ್ಲಿ ನಾನು ಏನನ್ನೂ ಹೇಳಿಲ್ಲ. ಹೆತ್ತ ಮಗನನ್ನು ಕಳೆದುಕೊಂಡು ಸಂಕಟ ಪಡುತ್ತಿದ್ದೇವೆ. ವಿಶಾಲ ಭಾವನೆಯಿಂದ ಯಾರು ಬಂದರೂ ಬರಲಿ ಎನ್ನುತ್ತೇವೆ. ವೈಯಕ್ತಿಕವಾಗಿ ನಟ ದರ್ಶನ್ ಬರಲಿ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ಪೊಲೀಸ್, ಸರ್ಕಾರ ಕ್ರಮ ಕೈಗೊಳ್ಳುತ್ತದೆ. ನಾವು ಕಾನೂನು ಹೋರಾಟ ನಿರಂತರವಾಗಿ ಮಾಡುತ್ತೇವೆ. ರಾಜ್ಯ ಸರ್ಕಾರ ಇಲ್ಲಿಯವರೆಗೆ ನಮಗೆ ನ್ಯಾಯ ದೊರಕಿಸಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂಬುದು ನಮ್ಮ ಮನವಿ. ಈ ಪ್ರಕರಣದಲ್ಲಿ ದರ್ಶನ್ ಜೊತೆ ಸಂಧಾನ ಅಸಾಧ್ಯ ಎಂದು ಹೇಳಿದ್ದಾರೆ.
