ರಾಯಚೂರು: ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಒಬ್ಬರು ಪ್ರೇಯಸಿಯೊಂದಿಗೆ ಸರಸ ಸಲ್ಲಾಪದಲ್ಲಿದ್ದಾಗಲೇ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಜಿಲ್ಲೆಯ ಸಿರವಾರದಲ್ಲಿ ಈ ಘಟನೆ ನಡೆದಿದೆ. ಪತ್ನಿಗೆ ಕೈಕೊಟ್ಟು ಪ್ರೇಯಸಿಯೊಂದಿಗೆ ವಾಸಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ನನ್ನು ಪೊಲೀಸ್ ಸಿಬ್ಬಂದಿಯೇ ಆಗಿರುವ ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ರಾಜ್ ಮಹಮ್ಮದ್ ಸಿರವಾರದಲ್ಲಿ ಪ್ರೇಯಸಿಗಾಗಿ ಮನೆ ಮಾಡಿದ್ದ.
ಇತ್ತ ದೇವದುರ್ಗ ಠಾಣೆ ಪೊಲೀಸ್ ಕಾನ್‌ಸ್ಟೇಬಲ್ ಆಗಿರುವ ಪತ್ನಿ ಪ್ಯಾರಿ ಬೇಗಂರೊಂದಿಗೆ ಅಂತರ ಕಾಯ್ದುಕೊಂಡಿದ್ದ. ಇವರನ್ನು ಕೂಡ ಪ್ರೀತಿಸಿ ಮದುವೆಯಾಗಿದ್ದ. ಈ ವಿಷಯವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಪೊಲೀಸ್ ಹಿರಿಯ ಅಧಿಕಾರಿಗಳು ಬುದ್ದಿವಾದ ಹೇಳಿದರೂ ಬದಲಾಗಿರಲಿಲ್ಲ.
ಗಂಡ ಮತ್ತು ಆತನ ಪ್ರೇಯಸಿಯನ್ನು ಮನೆಯಲ್ಲಿ ಲಾಕ್ ಮಾಡಿದ ಮಹಿಳಾ ಪೇದೆ ಪ್ಯಾರಿ ಬೇಗಂ ಸ್ಥಳದಲ್ಲೇ ಎಸ್ಪಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿರವಾರ ಠಾಣೆ ಪಿಎಸ್ಐ ಗುರುಚಂದ್ರ ಯಾದವ್ ಮನೆ ಬೀಗ ತೆಗೆದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪತಿಯ ಕಳ್ಳಾಟಕ್ಕೆ ಬೇಸತ್ತ ಮಹಿಳಾ ಪೇದೆ ನನಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.