ಭೂಮಿಯಲ್ಲಿ ಮನುಷ್ಯರು ಜಾತಿ-ಧರ್ಮಗಳ ದಳ್ಳುರಿಗೆ ಸಿಲುಕಿದ್ದಾರೆ. ಈ ಮಧ್ಯೆ ಗೋಮಾತೆ ಬೀದಿ ನಾಯಿಗಳಿಗೆ ಹಾಲುಣಿಸುವ ಮೂಲಕ ಮನುಷ್ಯರಿಗಿಂತ ನಾವೇ ಮೇಲು ಎಂದಂತಿದೆ. ಅಲ್ಲದೇ, ಇಡೀ ಭಾರತೀಯರು ಪೂಜೆ ಮಾಡುವ ಗೋಮಾತೆ ಜಾತಿ-ಧರ್ಮಗಳ ಮಧ್ಯೆ ಹೊಡೆದಾಡದಿರಿ ಎಂದು ಈ ರೀತಿಯಾಗಿ ಸಂದೇಶ ಸಾರಿರಬಹುದು ಎನ್ನಲಾಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಹಸಿವಿನಿಂದ ಕಂಗೆಟ್ಟಿದ್ದ ನಾಯಿ ಮರಿಗಳಿಗೆ ಗೋಮಾತೆ ಹಾಲುಣಿಸಿದೆ. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಸುವಿನ ಈ ಮಾತೃ ವಾತ್ಸಲ್ಯಕ್ಕೆ ನೆಟ್ಟಿಗರು ಮನತುಂಬಿ ಹರಿಸುತ್ತಿದ್ದಾರೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅಪಘಾತವೊಂದರಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ, ನಾಯಿ ಮರಿಗಳಿಗೆ ಹಸುವೊಂದು ಹಾಲುಣಿಸಿ ಮಾತೃ ಪ್ರೇಮವನ್ನು ನೀಡಿತ್ತು. ಇದು ಹಳೆಯ ವಿಡಿಯೋ ಆಗಿದ್ದರೂ ಈಗ ಮತ್ತೆ ವೈರಲ್ ಆಗಿದೆ. “ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ನಾಯಿ ಮರಿಗಳನ್ನು ದತ್ತು ತೆಗೆದುಕೊಂಡ ಹಸು” ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.
ತಾಯಿ ಕಳೆದುಕೊಂಡು ತಬ್ಬಲಿಯಾಗಿ, ಹಸಿವಿನಿಂದ ನರಳಾಡುತ್ತಿದ್ದ ಮೂರರಿಂದ ನಾಲ್ಕು ನಾಯಿ ಮರಿಗಳಿಗೆ ಗೋ ಮಾತೆ ಹಾಲುಣಿಸುವ ಮೂಲಕ ಮಾತೃ ಪ್ರೇಮ ಮೆರೆದ ದೃಶ್ಯ ಇದರಲ್ಲಿದೆ.