ಶ್ರೀನಗರ: ಸೇನಾ ಶಿಬಿರದ (Army Picket) ಮೇಲೆ ಉಗ್ರರು (Terrorist) ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಓರ್ವ ಯೋಧ (Soldier) ಗಾಯಗೊಂಡಿರುವ ಈ ಘಟನೆ ಜಮ್ಮು-ಕಾಶ್ಮೀರದ (Jammu Kashmir) ರಜೌರಿಯ (Rajouri) ಹಳ್ಳಿಯಲ್ಲಿ ನಡೆದಿದೆ. ಉಗ್ರರು ಸೇನಾ ಶಿಬಿರವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಇದು ಸೋಮವಾರ ಬೆಳಿಗ್ಗೆ 4 ಗಂಟೆಯ ವೇಳೆಗೆ ನಡೆದಿದೆ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಕೂಡ ಉಗ್ರರ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಸದ್ಯ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಯುತ್ತಿದೆ.
ಘಟನೆಯ ನಂತರ ಭದ್ರತಾ ಪಡೆಗಳು ಭಯೋತ್ಪಾದಕರಿಗಾಗಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
