ಕರ್ನಾಟಕ ಸರಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಶ್ರೇಷ್ಠ ಸರಕಾರಿ ವೈದ್ಯ ಪ್ರಶಸ್ತಿ ಪಡೆದ, ಪ್ರಾಥಮಿಕ ಅರೋಗ್ಯ ಕೇಂದ್ರ ನಾಡದ ವೈದ್ಯಾಧಿಕಾರಿಗಳಾದ, ಡಾ. ಚಿಕ್ಮರಿ ಅವರನ್ನು ದಲಿತ ಸಂಘರ್ಷ ಸಮಿತಿ ನಾಡ ಸೇನಾಪುರ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಸಭೆಯ ಅಧ್ಯಕ್ಷತೆಯನ್ನು ಸೇನಾಪುರ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸತೀಶ್. ಕೆ. ರಾಮನಗರ ವಹಿಸಿದರು. ಸಭೆಯಲ್ಲಿ ತಾಲೂಕು ಪಂಚಾಯತ್ ಮಾಜಿ ದಸ್ಯರಾದ ಪ್ರಭು ಕೆನಡಿ ಪಿರೇರಾ, ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳಾದ ಗೋಪಾಲಕೃಷ್ಣ ನಾಡ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರಿತಾ ಪಾಯಸ್, ಅಂಗನವಾಡಿ ಶಿಕ್ಷಕಿ ಸುಶೀಲಾ, ನಾಡ ಗ್ರಾಮ ಪಂಚಾಯತ್ ಸದಸ್ಯರಾದ ಜಯ ಪೂಜಾರಿ, ಹಿರಿಯರಾದ ಕೃಷ್ಣ, ಮುಖಂಡರಾದ ಸುರೇಶ್ ಪಡುಕೋಣೆ, ಸತೀಶ್ ಕಾಂಚನ್, ದಯಾನಂದ ದೇವಾಡಿಗ, ಶಿವಾನಂದ ಭಂಡಾರಿ, ಸಂತೋಷ್ ತೆಂಕಬೈಲ್ ರಾಮಚಂದ್ರ ಬಾಬು ದೇವಾಡಿಗ ಮೊದಲದವರು ಉಪಸ್ಥಿತರಿದ್ದರು. ಶಂಭು ಗುಡ್ಡ ಮಾಡಿ ಕಾರ್ಯಕ್ರಮ ನಿರೂಪಸಿದರು. ಸುರೇಂದ್ರ ರಾಮನಗರ ಸ್ವಾಗತಿಸಿ, ವಂದಿಸಿದರು.