ವಾಷಿಂಗ್ಟನ್: ಯುಎಸ್ ಅಧ್ಯಕ್ಷ (US President) ಜೋ ಬೈಡೆನ್ (Joe Biden) ಅವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.
ಹೀಗಾಗಿ ಅಧ್ಯಕ್ಷರು ತಮ್ಮ ಪ್ರಚಾರದ ಪ್ರವಾಸವನ್ನು ರದ್ದು ಮಾಡಿದ್ದಾರೆ. ಶೀತ, ಕೆಮ್ಮು, ಅಸ್ವಸ್ಥತೆಯಿಂದ ಬೈಡೆನ್ ಬಳಲುತ್ತಿದ್ದಾರೆ. ಕೋವಿಡ್ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಬೈಡೆನ್, ನಾನು ಚೆನ್ನಾಗಿದ್ದೇನೆ ಎಂದು ಜನರಿಗೆ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರಚಾರ ಸಮಾವೇಶವೊಂದರಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲೆಗೆ ಯತ್ನ ನಡೆದಿತ್ತು. ದಾಳಿಯನ್ನು ಬೈಡೆನ್ ಖಂಡಿಸಿದ್ದರು. ಚುನಾವಣೆ ಹೊತ್ತಿನಲ್ಲಿ ಅಮೆರಿಕ ಅಧ್ಯಕ್ಷರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.


















