ಚಿಕ್ಕಬಳ್ಳಾಪುರ: ಟೊಮೆಟೊ ತೋಟದ ಮೇಲೆ ಯಾರ ಕೆಟ್ಟ ಕಣ್ಣು ಬೀಳಬಾರದೆಂಬ ಕಾರಣಕ್ಕೆ ರೈತರೊಬ್ಬರು ಸನ್ನಿ ಲಿಯೋನ್ ಹಾಗೂ ರಚಿತಾ ರಾಮ್ ಬ್ಯಾನರ್ ಹಾಕಿದ್ದಾರೆ.
ಯಾರ ದೃಷ್ಟಿಯೂ ಬೀಳಬಾರದೆಂದು ದೃಷ್ಟಿ ದೋಷ ನಿವಾರಣೆಗೆ ಚಿಕ್ಕಬಳ್ಳಾಪುರದ (Chikkaballapura) ರೈತರೊಬ್ಬರು ದೃಷ್ಟಿಬೊಂಬೆಗೆ ಬದಲಾಗಿ ನಟಿ ರಚಿತಾ ರಾಮ್ (Rachita Ram) ಹಾಗೂ ಮಾದಕ ನಟಿ ಸನ್ನಿ ಲಿಯೋನ್ (Sunny Leone) ಬ್ಯಾನರ್ ಕಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಯುವ ರೈತ ದೀಪಕ್ ಈ ರೀತಿ ಮಾಡಿರುವ ರೈತ. ಈ ರೈತ 5 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದರು. ಅದು ಇನ್ನೇನು ಕಾಯಿ ಬಿಡುವ ಸಮಯವಿದೆ. ಹೀಗಾಗಿ ಟೊಮೆಟೊ ಬೆಳೆ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲಿ, ಒಳ್ಳೆಯ ಫಸಲು ಬಂದು ಒಳ್ಳೆ ಲಾಭ ಸಿಗಲಿ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ರೈತನ ಈ ಕಾರ್ಯಕ್ಕೆ ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದಾರೆ.
