ಮಿತ್ರ (Mithra) ಚಂದನವನದ ಕಾಮಿಡಿ ಸ್ಟಾರ್ ಗಳಲ್ಲಿ ಒಬ್ಬರು. ಕಿರುತೆರೆ, ಹಿರಿತೆರೆಗಳಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಹೆಚ್ಚಾಗಿ ಕಾಮಿಡಿ ಪಾತ್ರದ ಮೂಲಕವೇ ಜನರನ್ನು ರಂಜಿಸುತ್ತಿದ್ದರು. ಆದರೆ, ಈಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ನಟ ಮಿತ್ರ ಖದರ್ ಬದಲಾಗಿದೆ. ಮಿತ್ರ ಈಗ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ (Karavali Film) ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಮಿತ್ರ ಅವರ ಗೆಟಪ್ ಸಂಪೂರ್ಣವಾಗಿ ಬದಲಾಗಿದೆ. ಇವರು ಮಿತ್ರ ಅವರೇನಾ ಎಂಬ ಮಟ್ಟಿಗೆ ಆಶ್ಚರ್ಯವಾಗುವುದಂತೂ ಸತ್ಯ. ಈ ಲುಕ್ ಮಿತ್ರ ಅವರ ಕೆರಿಯರ್‌ನಲ್ಲಿ ಟರ್ನಿಂಗ್ ಪಾಯಿಂಟ್ ಕೊಡುತ್ತಿದೆ.
ಮಿತ್ರ ಸ್ಯಾಂಡಲ್‌ವುಡ್‌ನ ಖಡಕ್ ವಿಲನ್ ಆಗಲಿದ್ದಾರೆ. ಗಡ್ಡ ಬಿಟ್ಟು ಲುಕ್ ಬದಲಾಯಿಸಿಕೊಂಡ ಮೇಲೆ ಬೇರೆ ರೀತಿ ಪಾತ್ರಗಳು ಹುಡುಕಿ ಬರುತ್ತಿವೆಯಂತೆ. ಸದ್ಯ ಅದಕ್ಕಾಗಿ ಒಂದು ಸ್ಟೈಲೀಶ್ ವಿಲನ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

ಮಿತ್ರ ಅವರು ಮಾಡಿಸಿರುವ ಫೋಟೋಶೂಟ್ ಫೋಟೋಗಳನ್ನು ನೋಡಿದರೆ ಒಂದು ಕ್ಷಣ ಎಲ್ಲರಿಗೂ ಶಾಕ್ ಆಗುತ್ತದೆ. ವಿಲನ್ ಲುಕ್ ನಲ್ಲಿ ಸಾಕಷ್ಟು ವಿಭಿನ್ನ ಶೇಡ್ ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಶೂಟ್ ಮಾಡಿರುವುದು ‘ಕರಾವಳಿ’ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್. ಇದೊಂದೇ ಚಿತ್ರ ಅಲ್ಲ. ಮಿತ್ರ ಅವರು ‘ಕರಾವಳಿ’ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ.