ಬೆಂಗಳೂರು: ರಾಜ್ಯ ಸರ್ಕಾರವು ಗ್ಯಾರಂಟಿಗಳಿಂದಾಗಿ ಹೈರಾಣಾಗಿದೆ. ಹೀಗಾಗಿ ಬಸ್ ದರ ಏರಿಕೆ ಮಾಡುತ್ತದೆ ಎಂದೇ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಈ ಮಧ್ಯೆ ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ರಾಜು ಕಾಗೆ (Raju Kage) ಹಾಗೂ ಸಾರಿಗೆ ನಿಗಮದ ಅಧ್ಯಕ್ಷ ಶ್ರೀನಿವಾಸ್ ದರ ಏರಿಕೆಯ ಕುರಿತು ಮಾತನಾಡಿದ್ದರು. ಈ ಮಧ್ಯೆ ಸಾರಿಗೆ ಸಚಿವರು ಮಾತನಾಡಿದ್ದಾರೆ. ದರ ಏರಿಕೆ ಕುರಿತು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಆದರೆ, ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸಾರಿಗೆ ದರ ಏರಿಕೆ ಕುರಿತು ಮಾತನಾಡಿದ್ದ ರಾಜು ಕಾಗೆ, ಹಾಗೂ ಶ್ರೀನಿವಾಸ್, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡಿಸೇಲ್ ಹಾಗೂ ಬಸ್ ಬಿಡಿ ಭಾಗಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ನಷ್ಟದಲ್ಲಿದ್ದೇವೆ. ಆದರೂ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದರು.
ಕಳೆದ ತ್ರೈಮಾಸಿಕದಲ್ಲಿ 295 ಕೋಟಿ ರೂ. ನಷ್ಟವಾಗಿದೆ. ಟಿಕೆಟ್ ದರ (Ticket Price) ಏರಿಸದೇ ಇದ್ದರೆ ಕೆಎಸ್‌ಆರ್‌ಟಿಸಿ (KSRTC) ಸಂಸ್ಥೆ ಉಳಿಯುವುದಿಲ್ಲ. ಹೀಗಾಗಿ ದರ ಹೆಚ್ಚಳ ಮಾಡಲಾಗುವುದು.ಇತ್ತೀಚೆಗಷ್ಟೇ ನಿಗಮದ ಸಬೆ ನಡೆದಿದ್ದು, ಶೇ. 15ರಿಂದ 20ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆಯನ್ನೇ ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಹೇಳಿದ್ದರು. ಆದರೆ, ಅವರ ಹೇಳಿಕೆಯ ಬೆನ್ನಲ್ಲಿಯೇ ಸಾರಿಗೆ ಸಚಿವರು ಸದ್ಯದರ ದರ ಏರಿಕೆ ಇಲ್ಲ ಎಂದು ಹೇಳಿದ್ದಾರೆ.