ಪ್ರತಿಯೊಬ್ಬರೂ ಅವರಿಗೆ ಕೇಳುತ್ತಿದ್ದದ್ದು ಒಂದೇ. ನಿಮಗೇ ವಯಸ್ಸು ಆಗಲ್ವಾ? ಅದಕ್ಕೆಲ್ಲಾ ಅವರಿಂದ ಸಿಗ್ತಾ ಇದ್ದ ಉತ್ತರ ನಗು.. ಬಹುಶಃ ಸದಾ ನಗ್ ನಗ್ತಾ ಇದ್ರೆ ವಯಸ್ಸು ಆಗೋದಿಲ್ವೇನೋ.. ಅವರು ಯಾವ ಡಯಟ್ ಫಾಲೋ ಮಾಡ್ಲಿಲ್ಲ, ವೈಟ್ ಲಾಸ್ ಕೊರ್ಸ್ಗಳನ್ನೂ ಕಂಡಿರಲಿಲ್ಲ.. ಆದರೂ ಅವರು 57 ವರ್ಷ ಆದ್ರೂ ಅವರೇ ಹೇಳಿಕೊಳ್ಳುವಂತೆ ಸ್ವೀಟ್ 16 ತರಾನೇ ಕಾಣಿಸ್ತಾ ಇದ್ರು.
ಮೂರು ತಲೆಮಾರುಗಳಿಗೆ ಅವರು ಚಿರಪರಿಚಿತ.. ಅವರು ನಮ್ಮ ತಂದೆಯರ ಕಾಲದಲ್ಲಿ ನಿರೂಪಣೆ ಮಾಡ್ತಾ ಇದ್ರು.. 90ರ ದಶಕದಲ್ಲೇ ಅವರು ಕರ್ನಾಟಕದ ಮನೆ ಮನಗಳಲ್ಲಿ ಜನಪ್ರಿಯವಾಗಿದ್ರು. ನಮ್ಮ ಕಾಲದಲ್ಲೂ ಅವರು ಫುಲ್ ಫೇಮಸ್.,, ಸಿನಿಮಾಗಳಲ್ಲೂ ನಟಿಯಾಗಿ ಮಿಂಚಿದ್ರು.. ನಮ್ಮ ಮಕ್ಕಳು ಅಂದ್ರೆ ಈಗಿನ ಜನರೇಷನ್ ಸಹ ಅವರನ್ನ ಮಜಾ ಟಾಕೀಸ್ನಲ್ಲಿ ನೋಡಿ ಮೆಚ್ಚಿಕೊಂಡಿದ್ರು, ಹೀಗೆ ಮೂರು ತಲೆಮಾರುಗಳನ್ನೂ ಮೋಡಿ ಮಾಡಿದ್ದ ನಟಿ ಅಪರ್ಣ.

ಚಿಕ್ಕಂದಿನಿಂದಲೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡಿದ್ದ ಅಪರ್ಣ, ಸಾಕಷ್ಟು ಪುಸ್ತಕಗಳನ್ನ ಓದ್ತಾ ಇದ್ರು, ತಮ್ಮ ತಂದೆ ಪತ್ರಿಕೆಯಲ್ಲಿ ಕೆಲಸ ಮಾಡ್ತಾ ಇದ್ದಿದ್ದರಿಂದ ಪುರವಣಿ ಓದೋದನ್ನ ಅಭ್ಯಾಸ ಮಾಡಿಕೊಂಡಿದ್ರು, ಹೀಗೆ ಓದಿನ ಮೂಲಕ ತಮ್ಮ ಕನ್ನಡವನ್ನ ಚೆಂದ ಗೊಳಿಸಿಕೊಂಡ ಅಪರ್ಣ.. ಜೇನಿನ ಸಿಹಿಯಂತೆ ಮಾತಾಡೋದನ್ನ ಕರಗತ ಮಾಡಿಕೊಂಡಿದ್ರು. 18ನೇ ವುಯಸ್ಸಿಗೆ ಸಿನಿಮಾ ರಂಗಕ್ಕೆ ಬಂದರೂ ಸಹ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.. ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲ ಅಂತಾ ಅವರು ಕೈ ಕಟ್ಟಿ ಕೂರಲೂ ಇಲ್ಲ.. 90ರ ದಶಕದಲ್ಲೇ ಕಿರುತೆರೆಗೆ ಕಾಲಿಟ್ಟ ಅಪರ್ಣ ಸಾಕಷ್ಟು ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿದ್ರು, ಜನಮೆಚ್ಚುಗೆ ಪಡೆದುಕೊಂಡ್ರು.
ಅಪರ್ಣ 1984ರಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ರು. ಅಂದ್ರೆ ಬರೋಬ್ಬರಿ 40 ವರ್ಷಗಳ ಹಿಂದೆಯೇ ಇವರು ಚಿತ್ರರಂಗಕ್ಕೆ ಕಾಲಿಟ್ಟಿದ್ರು, ಆಗಲೇ ಅವರಿಗೆ 18 ವರ್ಷ ವಯಸ್ಸು, 40 ವರ್ಷಗಳ ಹಿಂದೆ ಅವರು ಹೇಗಿದ್ರೋ ಇತ್ತೀಚೆಗೆ ಅವರು ಕಾರ್ಯಕ್ರಮ ನಡೆಸಿಕೊಟ್ಟಾಗಲೂ ಅದೇ ರೀತಿ ಇದ್ರು. ಅವರ ದೇಹದಲ್ಲೇ ಆಗಲಿ ಮನಸ್ಸಿನಲ್ಲೇ ಆಗಲಿ ಅಥವಾ ಅವರ ಧ್ವನಿಯಲ್ಲೇ ಆಗಲಿ ಯಾವುದೇ ಬದಲಾವಣೆ ಇರಲಿಲ್ಲ.. ಕಿತ್ತು ತಿನ್ನೋ ನೋವು ಇದ್ರು.. ಬದುಕಿ ಬಾಳಬೇಕೆಂಬ ಆಸೆಗಳಿದ್ರು ಅವರು ಅದನ್ನ ಎಲ್ಲಿಯೂ ತೋರಿಸಿಕೊಳ್ಳಲೇ ಇಲ್ಲ. ಈಗ ಅವರು ಚಿರ ಯೌವ್ವನೆಯಾಗಿ ತಮ್ಮ ಬದುಕನ್ನ ಕೊನೆಗೊಳಿಸಿದ್ದಾರೆ.

ಕ್ಯಾನ್ಸರ್ನಿಂದ ಬಳಲ್ತಾ ಇದ್ದ ಅಪರ್ಣ ಅವರನ್ನ ಇತ್ತೀಚೆಗೆ ಅವರ ಸ್ನೇಹಿತೆಯರು ಮಾತಾಡಿಸಲು ಹೋಗಿದ್ದಾಗಲೂ ಅವರು ತಮ್ಮ ವಯಸ್ಸಿನ ಬಗ್ಗೆ ಮಾತಾಡಿದ್ರು. ನೋಡಿ ನನ್ನ ಹೊಸ ಹೇರ್ ಸ್ಟೈಲ್ ಹೇಗಿದೆ ಅಂತಾ, ಕ್ಯಾನ್ಸರ್ ಟ್ರೀಟ್ಮೆಂಟ್ಗಾಗಿ ಕತ್ತರಿಸಿದ್ದ ಕೂದಲನ್ನೇ ಹೊಸ ಸ್ಟೈಲ್ ಅಂತಾ ತೋರಿಸಿದ್ದ ಅಪರ್ಣ, ನನಗಿನ್ನೂ ಸ್ವೀಟ್ 16, ಹುಚ್ಚುಕೋಡಿ ಮನಸ್ಸು ಅಂತಾ ಹಾಡು ಹೇಳಿದ್ರು. ಹಾಗೆ ಪ್ರತಿ ಸಂದರ್ಭದಲ್ಲೂ ತನ್ನೊಳಗಿದ್ದ ನೋವನ್ನ ನುಂಗಿಕೊಂಡು ಅದನ್ನ ಆಚೆ ತೊರಿಸಿಕೊಳ್ಳದೆ ಎಲ್ಲರನ್ನೂ ರಂಜಿಸುತ್ತಿದ್ದ ಅಪರ್ಣ ಸ್ನೇಹಿತರಿಗೆಲ್ಲಾ ಅಚ್ಚುಮೆಚ್ಚಾಗಿದ್ರು.
ಅಪರ್ಣಾ ಅವರು ತಮ್ಮ ಜೀವನುದ್ದಕ್ಕೂ 7000 ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿದ್ದಾರೆ.. ಅಪರ್ಣಾ ನಿರೂಪಣೆ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.. ಸಿ.ಎಂ ಭಾಗವಹಿಸಿದ ಕಾರ್ಯಕ್ರಮ ಇಂದ ಹಿಡಿದು ಪ್ರಧಾನಿಗಳ ಸಮ್ಮುಖದಲ್ಲೂ ಸಹ ನಿರೂಪಣೆ ಮಾಡಿರೋ ಹೆಗ್ಗಳಿಕೆ ಅಪರ್ಣಾ ಅವ್ರಿಗೆ ಸಲ್ಲುತ್ತೆ.. ಕನ್ನಡಕ್ಕೆ ವಿಶೇಷ ಮೆರುಗನ್ನ ತಂದು ಕೊಟ್ಟ ಅಪ್ರತಿಮ ನಿರೂಪಕಿ ಅಂದ್ರೆ ಅದು ಒನ್ ಅಂಡ್ ಓನ್ಲಿ ಅಪರ್ಣಾ. ಇಂತಹ ಅಪರೂಪದ ನಿರೂಪಕಿ ನಮ್ಮ ನಡುವೆ ಇಲ್ಲ.. ಇಹಲೋಕದ ಯಾತ್ರೆ ಮುಗಿಸಿದ್ದಾರೆ.. ಆ ಮೂಲಕ ತಾವು ಕಂಡ ಕನಸುಗಳನ್ನ ಅಪೂರ್ಣ ಮಾಡಿ ಹೋಗಿದ್ದಾರೆ.. ಅಷ್ಟಕ್ಕೂ ಅಪರ್ಣಾ ಅವರ ಕನಸು ಏನಾಗಿತ್ತು? ಏನೆಲ್ಲಾ ಕನಸು ಕಂಡಿದ್ರು ಅಂತ ನಿಮಗೆ ಹೇಳಲೇಬೇಕು. ನಿಮಗೆಲ್ಲಾ ಗೊತ್ತಿರುವಂತೆ ಅಪರ್ಣಾ ಅದ್ಭುತ ನಿರೂಪಕಿಯಾಗಿದ್ರು.. ಅವ್ರು ಸಿನಿಮಾಗಳಲ್ಲಿ ಪಾತ್ರಗಳನ್ನ ಮಾಡಿದ್ರು.. ಸೀರಿಯಲ್ ನಲ್ಲಿ ನಟಿಸಿದ್ರು.. ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ರೂ ಸಹ ಹೆಚ್ಚಿನ ಸಕ್ಸಸ್ ಸಿಕ್ಕಿದ್ದು ನಿರೂಪಣೆ. ಪುಟ್ಟಣ್ಣ ಕಣಗಾಲ್ ರ ಗರಡಿಯಿಂದ ಅಪರ್ಣಾ ಅವರ ನಟನೆಯ ಜರ್ನಿ ಶುರುವಾಯ್ತು.. ಮೊದಲ ಸಿನಿಮಾದಲ್ಲಿಯೇ ಅದ್ಭುತ ಅಭಿನಯದ ಮೂಲಕ ಚಿತ್ರರಸಿಕರ ಗಮನ ಸೆಳೆದಿದ್ರು.. ಆದ್ರೂ ಅವ್ರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದು ಬೆರಳೆಣಿಕೆಯ ಸಿನಿಮಾಗಳಲ್ಲಷ್ಟೇ..
ಅಪರ್ಣಾ ಅವ್ರನ್ನ ನಟಿಯಾಗಿ, ಕಲಾವಿದೆಯಾಗಿ ಇಷ್ಟಪಟ್ಟಿದ್ಕಿಂತ ಹೆಚ್ಚು ಅವರ ನಿರೂಪಣೆಯನ್ನ ಕನ್ನಡಿಗರು ಇಷ್ಟಪಟ್ಟರು.. ಹೀಗಾಗಿ ತನ್ನನ್ನ ಅಪಾರವಾಗಿ ಪ್ರೀತಿಸಿದ, ಅಭಿಮಾನಿಸಿದ ನಿರೂಪಣೆ ಶೈಲಿಯಲ್ಲಿ ಬೇರೆಯವರಿಗೂ ಧಾರೆ ಎರೆಯೋ ಕನಸು ಕಂಡಿದ್ರು.. ಮತ್ತಷ್ಟು ಮಗದಷ್ಟು ನಿರೂಪಕರನ್ನ ತಯಾರಿಸೋ ಕನಸು ಕಂಡಿದ್ರು..

ಹೌದು ಅಪರ್ಣಾ ಅವರು ಅಂತರಾಷ್ಟ್ರೀಯ ಮಟ್ಟದ ಒಂದು ನಿರೂಪಣೆ ಶಾಲೆಯನ್ನ ತೆರೆಯೋ ಕನಸು ಕಂಡಿದ್ರು.. ಕನ್ನಡದಲ್ಲಿ ಒಂದು ಬೆಂಚ್ ಮಾರ್ಕ್ ಸೆಟ್ ಮಾಡಬೇಕು.. ಮತ್ತಷ್ಟು ಮಗದಷ್ಟು ಅದ್ಭುತ ನಿರೂಪಕರನ್ನ ತಯಾರು ಮಾಡಬೇಕು ಅಂತ ಅಂದುಕೊಂಡಿದ್ರು.. ಆ ವಿಷಯವನ್ನ ಅವರ ಆಪ್ತರ ಜೊತೆ ಹಂಚಿಕೊಂಡಿದ್ರು.. ಈ ವಿಷಯವನ್ನ ಅಪರ್ಣಾ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಂಕರ್ ಪ್ರಕಾಶ್ ನಮ್ಮ ಜೊತೆ ಬಿಚ್ಚಿಟ್ಟಿದ್ದಾರೆ.. ಆದ್ರೆ ಅಪರ್ಣಾ ಅವ್ರ ಕನಸು ನನಸು ಮಾಡಲು ವಿಧಿ ಅವಕಾಶ ಕೊಟ್ಟಿಲ್ಲ.. ಅಪರ್ಣಾ ಅವ್ರದ್ದು ಸಾಯುವ ವಯಸ್ಸಲ್ಲಾ.. ಅವರು ನಮ್ಮನ್ನಗಲಿದ್ದಾರೆ ಎನ್ನೋದನ್ನೆ ಯಾರೂ ನಂಬೋಕೆ ಸಾಧ್ಯವಾಗ್ತಿಲ್ಲ.. ಅರೇ ಲವಲವಿಕೆಯಿಂದ ನಿರೂಪಣೆ ಮಾಡ್ತಾ, ತನ್ಮೂಲಕ ಪ್ರತಿಯೊಬ್ಬರಲ್ಲೂ ಜೀವನ ಉತ್ಸಾಹ ತುಂಬುತಿದ್ದ ಪಟಪಟಾಕಿಯಂತಹ ಮಾತುಗಾರ್ತಿ ಇನ್ಮುಂದೆ ಮಾತಾಡೋದಿಲ್ಲ ಅನ್ನೋದನ್ನ ಯಾರು ತಾನೆ ಅರಗಿಸಿಕೊಳ್ಳಲು ಸಾಧ್ಯ..?