ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಿಪಾಡಿ- ಗುಹೇಶ್ವರ ರಸ್ತೆ ಮುಖ ಮಂಟಪ ಸಮೀಪ “ಶ್ರೀ ದುರ್ಗಾಂಬಾ ಬಾಡಿ ಬಿಲ್ಡರ್ಸ್” ಎಂಬ ನೂತನ “ವರ್ಕ್ ಶಾಪ್” ಶುಭಾರಂಭಗೊಂಡಿದೆ. ವಾಹನಗಳಿಗೆ ಸಂಬಂಧಿಸಿದಂತೆ, ಲಾರಿ,ಇನ್ಸುಲೇಟರ್,ಮಿಲ್ಕ್ ವಾಹನ,ಬೂಲೆರೋ,ಬಸ್ ಮತ್ತು ಮಿನಿ ಬಸ್ ಸೇರಿದಂತೆ ಇನ್ನಿತರ ವಾಹನಗಳ ಬಾಡಿ ವಿನ್ಯಾಸ ಹಾಗೂ ಪೇಂಟಿಂಗ್ ಮತ್ತು ಡೇಟಿಂಗ್,ಸ್ಟಿಕ್ಕರ್ ಕಟಿಂಗ್ ಮಾಡಿಕೊಡಲು ಸಕರ ಸೌಲಭ್ಯದೊಂದಿಗೆ ಈ ವರ್ಕ್ ಶಾಪ್ ಪ್ರಾರಂಭಗೊಳಿಸಲಾಗಿದೆ” ಎನ್ನುತ್ತಾರೆ ಜಂಟಿ ಮಾಲೀಕರಾದ ಉಮಾನಾಥ ಮತ್ತು ದೇವರಾಜ್ ಗಾಣಿಗ.

ವಿಶ್ವನಾಥ್ ಅವರು ಮಾತನಾಡಿ, “ಆಧುನಿಕ ಶೈಲಿಯ ಯಂತ್ರೋಪಕರಣಗಳನ್ನು ಹೊಂದಿರುವ “ಶ್ರೀ ದುರ್ಗಾಂಬ ಬಾಡಿ ಬಿಲ್ಡರ್ಸ್ ವಕ್ರ್ಸ್ ಶಾಪ್” ನಮ್ಮ ಪರಿಸರದಲ್ಲಿ ಆರಂಭಗೊಂಡಿರುವುದು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಬಾಡಿ ಬಿಲ್ಡರ್ಸ್ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಕಾಲದ ಸುರ್ಧಿಘವಾದ ಅನುಭವ ಹೊಂದಿರುವ ಉಮಾನಾಥ ಮತ್ತು ದೇವರಾಜ್ ಅವರ ಅನುಭವ ಸಾಕಷ್ಟು ಪ್ರೌಢಿಮಿಯಿಂದ ಕೂಡಿದ್ದು, ಇಲ್ಲಿ ನುರಿತ ಕೆಲಸಗಾರರು ಕಾರ್ಯನಿರ್ವಹಿಸಲಿದ್ದಾರೆ. ಯುವಕರ ಈ ನವ ಉದ್ಯಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಹಿರಿಯ ಶಿಕ್ಷಕರಾದ ಭಾಸ್ಕರ ಗಾಣಿಗ ಮಾತನಾಡಿ, “ತಾವು ಮಾಡುತ್ತಿರುವ ಕೆಲಸ ಕಾರ್ಯದ ಬಗ್ಗೆ ಬಹಳಷ್ಟು ಅನುಭವ ಪಡೆದು, ನಂತರ ಸ್ವಂತ ಉದ್ಯಮವನ್ನು ಆರಂಭಿಸಿರುವುದರಿಂದ, ವಾಹನಗಳ ಕೆಲಸ ಕಾರ್ಯವನ್ನು ಉತ್ತಮವಾದ ರೀತಿಯಲ್ಲಿ ಮಾಡಲಿದ್ದಾರೆ. ಯಾವುದೇ ಒಂದು ಕೆಲಸ ಮಾಡುವಾಗ ಆಯಾ ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿರುವುದು ಬಹಳಷ್ಟು ಮಹತ್ವದವಾದ ಅಂಶವಾಗಿದೆ. ಹಾಗಾಗಿ ಈ “ಯುವಕರ ವರ್ಕ್ ಶಾಪ್” ಉತ್ತಮ ರೀತಿಯಲ್ಲಿ ಸೇವೆ ನೀಡಿ, ಯಶಸ್ವಿಯಾಗಲಿ” ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಉಮಾನಾಥ ಮತ್ತು ದೇವರಾಜ್ ಅವರ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉದ್ಯಮದ ಯಶಸ್ಸಿಗಾಗಿ ಸ್ಥಳೀಯ ಅರ್ಚಕರು ಧಾರ್ಮಿಕ ಪೂಜಾ ಕಾರ್ಯವನ್ನು ನೆರವೇರಿಸಿಕೊಟ್ಟರು.
