ಹುಬ್ಬಳ್ಳಿ: ಆನ್ ಲೈನ್ ಗೇಮ್ ಗೀಳಿಗೆ ಬಿದ್ದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ರಾಕೇಶ್ ಶ್ರೀಶೈಲ್ ಜಂಬಲದಿನ್ನಿ (21) ಆತ್ಮಹತ್ಯೆಗೆ ಶರಣಾಗಿರುವ ಬಾಲಕ ಎಂದು ಗುರುತಿಸಲಾಗಿದೆ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ ಬಿವಿಬಿ ಕಾಲೇಜಿನಲ್ಲಿ (BVB College) ಬಿಇ 6ನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ ಎನ್ನಲಾಗಿದೆ. ಹೀಗಾಗಿ ಈ ವಿದ್ಯಾರ್ಥಿ ನಗರದಲ್ಲಿನ ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ಇರುತ್ತಿದ್ದ. ಆದರೆ, ಈತ ಕಾಲೇಜಿನ ವಿಷಯ ಓದುವುದಕ್ಕಿಂತ ಹೆಚ್ಚಾಗಿ ಆನ್ ಲೈನ್ ಗೇಮ್ ನಲ್ಲಿ ಮಗ್ನನಾಗುತ್ತಿರುವುದೇ ಹೆಚ್ಚಾಗಿತ್ತು.
ಆನ್ಲೈನ್ ಗೇಮ್ನಿಂದ ಹಣ ಕಳೆದುಕೊಂಡಿದ್ದ ಕಾರಣಕ್ಕೆ ಹಿಂಸೆ ಅನುಭವಿಸಿ, ರಾಕೇಶ್ ಮನನೊಂದು, ತಾನು ಇದ್ದ ಕೋಣೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಸತಿ ನಿಲಯಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.