ಬೆಂಗಳೂರು: ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದ್ದು, 31.02% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತೀ ಕಡಿಮೆ ಫಲಿತಾಂಶ ಬಂದಂತಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶವನ್ನು ಪ್ರಕಟಿಸಿದ್ದು, ಪರೀಕ್ಷೆ-2 ರಲ್ಲಿ 69,275 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜೂನ್ 14 ರಿಂದ 22ರ ವರೆಗೆ ಎಸ್ಸೆಸ್ಸೆಲ್ಸಿ 2 ಪರೀಕ್ಷೆಗಳು ನಡೆದಿದ್ದವು. 2,23,293 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಒಟ್ಟು 69,275 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅವರ ಪೈಕಿ ಬಾಲಕರು 38,820 ಹಾಗೂ ಬಾಲಕಿಯರು 30,455 ಉತ್ತೀರ್ಣರಾಗಿದ್ದಾರೆ. ಫಲಿತಾಂಶವನ್ನು ಮಂಡಳಿಯ ವೆಬ್‌ಸೈಟ್ https://karresults.nic.in ನಲ್ಲಿ ವೀಕ್ಷಿಸಬಹುದಾಗಿದೆ