.. ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ವತಿಯಿಂದ, ಶುಕ್ರವಾರ ಸಂಘದ ಕಛೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಸೇವಾ ನಿವೃತ್ತಿ ಹೊಂದಿದ “ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ.” ಅವರನ್ನು ಗೌರವಾರ್ಥವಾಗಿ ಸನ್ಮಾನಿಸಲಾಯಿತು.
ಸೂಸೈಟಿ ಅಧ್ಯಕ್ಷರಾದ “ಎಸ್.ರಾಜು ಪೂಜಾರಿ” ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಹಕಾರಿ ಸೇವೆಯಲ್ಲಿ ಜನಮನ್ನಣೆ ಗಳಿಸುವುದು, ಕಷ್ಟ ಸಾಧ್ಯ; ಆದರೆ, ತಮ್ಮ ಮೂರೂವರೆ ದಶಕದ ಸುಧೀರ್ಘ ಸೇವಾ ಅವಧಿಯಲ್ಲಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿದು, ವೃತ್ತಿ ಜೀವನದಲ್ಲಿ ಮತ್ತು ನಿವೃತ್ತಿ ನಂತರವೂ ಅಪಾರ ಜನಮನ್ನಣೆ ಗಳಿಸಿರುವುದು ವಿಶೇಷವಾದದ್ದು” ಎಂದರು.

ಈ ಸಂದರ್ಭದಲ್ಲಿ, ನಿರ್ದೇಶಕರುಗಳಾದ ಮಂಜು ಪೂಜಾರಿ ನಾವುಂದ, ರಾಮಕೃಷ್ಣ ಖಾರ್ವಿ, ಮಂಜುನಾಥ ಪೂಜಾರಿ, ಸೀತಾರಾಮ ಮಡಿವಾಳ, ಅಣ್ಣಪ್ಪ ಪೂಜಾರಿ ಯಡ್ತರೆ, ರತಿ ರಾಜು ಪೂಜಾರಿ ಇದ್ದರು. ಸಂಘದ ಉಪಾಧ್ಯಕ್ಷ, ಎಂ.ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೆ.ಕಿಟ್ಟಣ್ಣ ರೈ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.