ರೇಣುಕಾಸ್ವಾಮಿ ಕೊಲೆ ಪ್ರಕರಣ ಒಂದು ಸಿನಿಮಾ ಅಲ್ಲ ವೆಬ್ ಸಿರೀಸ್ ಮಾಡಬಹುದು. ಯಾಕೆ ಗೊತ್ತಾ ಈ ಪ್ರಕರಣ ದಿನದಿಂದ ದಿನಕ್ಕೆ ಹೊಸದೊಂದು ಟ್ವಿಸ್ಟ್ ಆಂಡ್ ಟರ್ನ್ ಪಡೆದಿಕೊಳ್ತಾ ಇದೆ. ಈ ಪ್ರಕರಣದಲ್ಲಿ ಡ್ರಾಮಾ, ಸಸ್ಪೆನ್ಸ್, ಮಿಸ್ಟರಿ, ಟ್ರ್ಯಾಜಡಿ, ಇನ್ ವೆಸ್ಟಿಗೇಷನ್ ಎಲ್ಲವೂ ಇದೆ. ಈ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ತಾ ಇದೆ ಅಂತ ಹೇಳೋದಕ್ಕೂ ಒಂದು ರೀಸನ್ ಇದೆ.
ಅದೇನಪ್ಪ ಅಂದ್ರೆ ವಿಚಾರಣೆ ಮುನ್ನವೇ ಜಾಮೀನು ಅರ್ಜಿಯನ್ನ ಮರಳಿ ಪಡೆದಿದ್ದಾನೆ ದರ್ಶನ್ ಸಹಚರ. ಯಸ್, ಅಸಲಿಗೆ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನರು ಜೈಲು ಸೇರಿದ್ದಾರೆ. ಈ ಪೈಕಿ ದರ್ಶನ್ ಗ್ಯಾಂಗ್‌ನ ಸಹಚರ ನಿಖಿಲ್ ನಾಯಕ್ ಜಾಮೀನು ಅರ್ಜಿ ಸಲ್ಲಿಸಿದ್ದ. ಈ ಕುರಿತು ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟ್‌ನಲ್ಲಿ ವಿಚಾರಣೆ ಕೂಡ ಇತ್ತು. ಬಟ್ ಅದೇನಾಯ್ತೋ ಏನೋ ಗೊತ್ತಿಲ್ಲ. ಸಡನ್ ಆಗಿ ಆರೋಪಿ ನಿಖಿಲ್ ನಾಯಕ್ ಪರ ವಕೀಲರು ಜಾಮೀನಿ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ.
ಮ್ಯಾಟರ್ ಏನಪ್ಪ ಅಂದ್ರೆ, ರೇಣುಕಾಸ್ವಾಮಿ ಕೊಲೆ ಕೇಸಿನ ಎ17 ಆರೋಪಿ ನಿಖಿಲ್ ನಾಯಕ್ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿಲ್ಲ. ಆತ ಅಭಿಮಾನ ಹಾಗೂ ಇತರೆ ಕಾರಣಕ್ಕೆ ಕಟ್ಟುಬಿದ್ದು, ಶವ ಬೀಸಾಡಲು ಮುಂದಾಗಿದ್ದ. ಹೀಗಾಗಿ ನಿಖಿಲ್‌ಗೆ ಜಾಮೀನು ಮಂಜೂರು ಮಾಡಬೇಕು ಅಂತ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದರು. ಬಟ್ ಅರ್ಜಿ ಮರಳಿ ಪಡೆದಿದ್ದು ನೋಡಿದ್ರೆ ಏನೋ ಸಮಸ್ಯೆ ಇದೆ ಅಂತ ಮೇಲ್ನೋಟಕ್ಕೆ ಕಾಣ್ತಾ ಇದೆ.
ಯಾವ ಕಾರಣಕ್ಕೆ ಅರ್ಜಿ ಮರಳಿ ಪಡೆದ್ರು ಅನ್ನೋದು ಲಾಯರ್ ಹಾಗೂ ಆರೋಪಿಗೇ ತಿಳಿದ ಮ್ಯಾಟರ್ ಇದೆ. ಬಟ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಿಖಿಲ್ ನಾಯಕ್ ಪಾತ್ರವೇನು? ಅನ್ನೋದನ್ನ ನೋಡೋದಾದ್ರೆ, ರೇಣುಕಾಸ್ವಾಮಿ ಡೇಡ್ ಬಾಡಿಯನ್ನು ಸುಮನಹಳ್ಳಿ ಜಂಕ್ಷನ್ ಸಮೀಪದ ಮೋರಿಗೆ ಮೃತದೇಹ ತಂದು ಬಿಸಾಡಿದ ಹಾಗೂ ನಟ ದರ್ಶನ್ ಹೆಸರು ಹೇಳದಂತೆ ಪೊಲೀಸರಿಗೆ ಶರಣಾದವರ ಪೈಕಿ ನಿಖಲ್ ನಾಯಕ್ ಸಹ ಒಬ್ಬ. ಇವನಿಗೆ ಕೇವಲ್ 21 ವ್ರರ್ಷ ಕಣ್ರೀ. ಇವನಿಗೆ 5 ಲಕ್ಷದ ಆಫರ್ ಕೊಟ್ಟಿದ್ರು. ಬಟ್ ಪೊಲೀಸರ ಹೊಡೆತ ತಡಿಯೋಕೆ ಆಗದೇ ಎಲ್ಲವನ್ನು ಬಾಯಿ ಬಿಟ್ಟಿದ್ದ.