
ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ನೂತನವಾಗಿ ತರೇವಾರಿ, ನವ-ನವೀನ ವಿನ್ಯಾಸ ಹೊತ್ತು ತರಲು “ತಲಂರಾಲು” ಎಂಬ “ಡಿಸೈನರ್ ಸ್ಟುಡಿಯೋ” ಶುಭಾರಂಭಗೊಂಡಿದೆ.
ವಿಶೇಷವಾಗಿ ಹೊಸ-ಹೊಸ ವಸ್ತ್ರ ವಿನ್ಯಾಸ ಬಯಸುವ ಮಹಿಳೆಯರಿಗಾಗಿ ಈ “TALAMRALU Designer Studio” ಆರಂಭಗೊಳಿಸಿದ್ದು, ಮಹಾಲಕ್ಷ್ಮೀ ಲೇಔಟ್ ಶಾಸಕ, ಮಾಜಿ ಸಚಿವ “ಕೆ.ಗೋಪಾಲಯ್ಯ”, ನಿನ್ನೆ (ಜು.7) ಸಂಜೆ ಆರು ಗಂಟೆಯ, ಗೋಧೂಳಿ ಮುಹೂರ್ತದಲ್ಲಿ ದೀಪ ಬೆಳಗುವ ಮೂಲಕ ಚಾಲನೆಕೊಟ್ಟರು.


ಈ ಸಮಯದಲ್ಲಿ ಅಂರರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತ ಚಲನಚಿತ್ರನಟ “ವೈಜನಾಥ್ ಬಿರಾದಾರ್” ಜೊತೆಗಿದ್ದು ಶುಭ ಹಾರೈಸಿದರು. ವಿಷ್ಣುವರ್ಧನ್ ಸೇನಾ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ, “ವಾಸುದೇವ್” ಹಾಗೂ ಪ್ರತಿಮಾ ವಾಸುದೇವ್ ರವರ ಪುತ್ರಿಯರಾದ ‘ದರ್ಶಿನಿ’ ಮತ್ತು ‘ಮೀನಾ’ ಈ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ವೇಳೆ “ವಿಷ್ಣು ಸೇನಾ ಸಮಿತಿ”ಯ ಗೆಳೆಯರು ಸೇರಿದಂತೆ ಹಲವು ಬಂಧು-ಮಿತ್ರರು ಜೊತೆಗಿದ್ದು, ಶುಭ ಕೋರಿದರು.

ಇನ್ನು ಈ ವಸ್ತ್ರ ವಿನ್ನಾಸ ಮಳಿಗೆಗೆ ಸಂಬಂಧಿಸಿದಂತೆ ಹೇಳುವುದಾದರೇ, ದರ್ಶಿನಿ ಮತ್ತು ಮೀನಾ ಎಂಬ ಈ ಅಕ್ಕ ತಂಗಿಯರು, ವಸ್ತ್ರ ವಿನ್ಯಾಸ(ಡಿಸೈನಿಂಗ್)ನಲ್ಲಿ ಬೇರೆ ಕಡೆ ಕೆಲಸಮಾಡಿಕೊಂಡು, ಆ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಪಡೆದು, ತಂದೆ ವಾಸುದೇವ ಮತ್ತು ತಾಯಿ ಪ್ರತಿಮಾ ವಾಸುದೇವ್ ರವರ ಸಲಹೆ-ಸಹಕಾರದೊಂದಿಗೆ *ತಲಂರಾಲು ಡಿಸೈನರ್ ಸ್ಟುಡಿಯೋ* ಪ್ರಾರಂಭಿಸಿದ್ದಾರೆ. ಇಲ್ಲಿ ಕಸ್ಟಮೈಸ್ಡ್ ಡ್ರೆಸ್, ರೆಂಟಲ್ ಡ್ರೆಸ್ ಸೌಲಭ್ಯ ಕೂಡ ಸಿಗಲಿದೆ. ಜೊತೆಗೆ ಮದುವೆ ಅಥವಾ ಇನ್ನಿತರೆ ಯಾವುದೇ ಶುಭ ಸಮಾರಂಭಕ್ಕೆ ಸಂಬಂಧಿಸಿದಂತೆ, ವೈಯಕ್ತಿಕ ಪೋಟೋಶೂಟ್, ‘ಇನ್ ಡೋರ್ ಫ್ರೀ-ವೆಡ್ಡಿಂಗ್ ಶೂಟ್’, ಮಾಮ್ಸ್ ಬೇಬಿ ಶವರ್ ಶೂಟ್, ನ್ಯೂ ಬೇಬಿ ಶೂಟ್ ಮಾಡಿಕೊಡುವ ಸುಸಜ್ಜಿತ ವ್ಯವಸ್ಥೆ ಇದೆ. ಒಟ್ಟಿನಲ್ಲಿ ವಿಭಿನ್ನ ಮತ್ತು ವಿಶೇಷ ರೀತಿಯ ವಿನ್ಯಾಸದೊಂದಿಗೆ ಹಾಗೂ ವಿಶೇಷ ಸಂದರ್ಭದ ಚಿತ್ರೀಕರಣದ ವ್ಯವಸ್ಥೆಯೂ ಸೇರಿದಂತೆ, ಹೊಸತನದಲ್ಲಿ ತೆರೆದುಕೊಂಡು, “ತಲಂರಾಲು ಡಿಸೈನರ್ ಸ್ಟುಡಿಯೋ” ಜನಾಕರ್ಷಣೆಯ ಕೇಂದ್ರವಾಗಲು ಸಜ್ಜುಗೊಂಡಿದೆ. ಹೊಸ-ಹೊಸ ವಿನ್ಯಾಸ ಹಾಗೂ ಹೊಸತನದ ಟ್ರೆಂಡಿ ಫೋಟೋಶೂಟ್ ಬಯಸುವವರು ಬಸವೇಶ್ವರ ನಗರದ “TALAMRALU Designer Studio”ಗೆ ಭೇಟಿಕೊಡಿ.
Address : #466, 3rd stage ,1st block , 2nd floor , above BIBA, Basaveshwaranagar, Bangalore-560079
Instagram – @talamralu
