
ಶಿರೂರು: ಮಂಗಳವಾರ ಮುಂಜಾನೆ ಬೀಸಿದ ಭಾರೀ ಗಾಳಿ ಮಳೆಗೆ ಶಿರೂರು ಗಡಿ ಭಾಗದಲ್ಲಿರುವ ಸಹರಾ ಹೋಟೆಲ್‌ನ ಮೇಲ್ಚಾವಣೆ ಹಾರಿ ಹೋಗಿದೆ. ಗಾಳಿಯ ಅಬ್ಬರಕ್ಕೆ ಹೋಟೆಲ್ ಸಂಪೂರ್ಣ ಕುಸಿದು ಬಿದ್ದು ನೆಲಸಮಗೊಂಡಿದೆ. ಮಂಗಳವಾರ ಬೀಸಿದ ಹಠಾತ್ ಗಾಳಿ ಈ ಭಾಗದಲ್ಲಿ ಬಾರೀ ಅವಘಡ ಉಂಟು ಮಾಡಿದೆ. ಹೋಟೆಲ್ ಮೇಲ್ಚಾವಣೆ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು, ಭಾರೀ ಗಾಳಿ-ಮಳೆಗೆ ಆಹುತಿಯಾಗಿದೆ.
ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
