ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಗಿದೆ. ಸದ್ಯ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನ ಕಳೆದಿದ್ದು ದೇಶದಲ್ಲಿ ಬರೋಬ್ಬರಿ 500 ಕೋಟಿ ರೂಪಾಯಿ ಗಳಿಸುವತ್ತ ಹೆಜ್ಜೆ ಇಟ್ಟಿದೆ.
ಅಷ್ಟೇ ಅಲ್ಲ ಈ ಚಿತ್ರವು ವಿಶ್ವ ಬಾಕ್ಸ್ ಆಫೀಸ್ನಲ್ಲೂ ಸಿನಿಮಾದ ಕಲೆಕ್ಷನ್ ಭರ್ಜರಿ ಆಗುತ್ತಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಲ್ಲ ಭಾಷೆಗಳಿಂದ ಸೇರಿ ಭಾನುವಾರಕ್ಕಿಂತ ಮುಂಚೆ 300 ಕೋಟಿ ರೂ. ಬಾಚಿದೆ. ಭಾನುವಾರ ಒಂದೇ ದಿನ ಈ ಚಿತ್ರ 83.2 ಕೋಟಿ ರೂಪಾಯಿ ಗಳಿಸಿದೆ.

‘ಕಲ್ಕಿ 2898 ಎಡಿ’ ಚಿತ್ರ ಮೂರು ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ 415 ಕೋಟಿ ರೂಪಾಯಿ ಬಾಚಿಕೊಂಡಿತ್ತು. ನಾಲ್ಕನೇ ದಿನದ ವಿಶ್ವ ಮಾರುಕಟ್ಟೆ ಲೆಕ್ಕಾಚಾರ ಇನ್ನಷ್ಟೇ ಹೊರಬೀಳಬೇಕಿದೆ. ಅದನ್ನೂ ಸೇರಿದರೆ ಸಿನಿಮಾದ ಗಳಿಕೆ ವಿಶ್ವಮಟ್ಟದಲ್ಲಿ 500 ಕೋಟಿ ರೂ. ದಾಟಲಿದೆ.
ಈಗ ಬಿಡಿಗುಡೆಯಾಗಿರುವುದು ಚಿತ್ರದ ಮೊದಲ ಭಾಗ ಮಾತ್ರ. ಎರಡನೇ ಭಾಗ ಕೂಡ ಬರಬೇಕಿದೆ. ಎರಡನೇ ಭಾಗದ ಶೂಟಿಂಗ್ ಶೇ. 60 ಪೂರ್ಣಗೊಂಡಿದೆ ಎಂದು ವರದಿ ಆಗಿದೆ. ಮೊದಲ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಎರಡನೇ ಚಿತ್ರಕ್ಕೂ ಸಿಗುವ ಸಾಧ್ಯತೆ ಇದೆ. ಈ ಚಿತ್ರ ಹಿಂದಿ ಮಂದಿಗೆ ಕೂಡ ಇಷ್ಟವಾಗಿದೆ. ಹೀಗಾಗಿ ಇನ್ನು ಹೆಚ್ಚು ಗಳಿಕೆ ಮಾಡುವ ಸಾಧ್ಯತೆ ಇದೆ.
ಅಂದಹಾಗೆ, ಕಲ್ಕಿ ಚಿತ್ರ ಇಂಟರ್ವಲ್ ವರೆಗೂ ಸ್ವಲ್ಪ ಅರ್ಥವಾಗದ ರೀತಿಯಲ್ಲಿದ್ದು, ಪ್ರೇಕ್ಷಕರನ್ನು ಯಾರು? ಯಾಕೆ? ಹೇಗೆ? ಎಂಬ ಗೊಂದಲಕ್ಕೆ ದೂಡುತ್ತಾ, ತಾಳ್ಮೆ ಪರೀಕ್ಷೆ ಮಾಡುತ್ತೆ. ನಂತರ ಸೆಕೆಂಡ್ ಹಾಫ್ನಲ್ಲಿ ಅದ್ಭುತ ಎನ್ನುವ ಮೇಕುಂಗ್, ಅಮಿತಾಬ್, ಪ್ರಭಾಸ್, ದೀಪಿಕಾ ಸೇರಿದಂತೆ ಸ್ಕ್ರೀನ್ ತುಂಬಿಕೊಂಡು ಭರ್ಜರಿ ಮನರಂಜನೆ ನೀಡುವ ದೊಡ್ಡ ತಾರಾಬಳಗವಿದ್ದು, ಚಿತ್ರವನ್ನು ರಂಗಾಗಿಸಿದೆ. ವಿಶೇಷವಾಗಿ ಬಿಗ್ ಬಿ ಅಮಿತಾಬ್ ಬಚ್ಚನ್ ಪಾತ್ರದಲ್ಲಿ ಜೀವಿಸಿ, ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಬಹುಕೋಟಿ ವೆಚ್ಚದ, ಬಹು ತಾರಾಗಣದ ಮನರಂಜನಾತ್ಮಕ ಸಿನಿಮಾ. ಕೊಟ್ಟ ಹಣಕ್ಕೆ ಮೋಸವಿಲ್ಲದೇ, ಭರಪೂರ ಮನರಂಜನೆ ಕೊಡುವ ಸಿನಿಮಾ. ಮನರಂಜನೆಗೆ ಬಯಸುವವರು ನೋಡಬಹುದು.
