ಕಾಂಗ್ರೆಸ್ ನಲ್ಲಿ ಅಭಿವೃದ್ಧಿ ಚರ್ಚೆಗಿಂತ ಸಿಎಂ, ಡಿಸಿಎಂ ಕುರ್ಚಿಯ ಚರ್ಚೆಗಳೇ ಹೆಚ್ಚಾಗುತ್ತಿವೆ. ಹೀಗಾಗಿ ಸ್ವ ಪಕ್ಷದವರೇ ಕಾಲೇಳೆಯುವ ಕಾರ್ಯ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ವಿಪಕ್ಷಗಳು, ಜನರ ಮುಂದೆ ಕಾಂಗ್ರೆಸ್ ನ್ನು ಛೀಮಾರಿ ಹಾಕಿ, ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಮುಂದಾಗಿವೆ.
ಕಾಂಗ್ರೆಸ್ ನಲ್ಲಿನ ಸಿಎಂ ಹಾಗೂ ಡಿಸಿಎಂ ಜಗಳ ಹಾಗೂ ಪೈಪೋಟಿ ಸರ್ಕಾರ, ಆಡಳಿತ ಯಂತ್ರದ ಮೇಲೆಯೂ ಪರಿಣಾಮ ಬೀರುತ್ತಿವೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ರೂಪಿಸಲು ಬಿಜೆಪಿ ಹಾಗೂ ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಿರೀಕ್ಷಿತ ಮಟ್ಟದ ಅಭಿವೃದ್ದಿ ಕಾರ್ಯಗಳಿಗೆ ಹಾಗೂ ಉತ್ತಮ ಆಡಳಿತದ ಕುರಿತಾದ ಚರ್ಚೆಗೆ ಅವಕಾಶಗಳು ಸಿಗುತ್ತಿಲ್ಲ ಎಂದು ಜನರ ಮುಂದೆ ಬರಲು ಮುಂದಾಗುತ್ತಿವೆ.

ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರು ಅಧಿಕಾರದ ಹೇಳಿಕೆಯಲ್ಲೇ ಮುಳುಗಿದ್ದಾರೆ. ಬಣದ ಕಿತ್ತಾಟದಲ್ಲಿದ್ದಾರೆ. ಈ ಮಧ್ಯೆ ಪೆಟ್ರೋಲ್ ಡೀಸೆಲ್ ದರ ಏರಿಕೆ ಆಗಿದೆ. ಗ್ಯಾರಂಟಿ ಯೋಜನೆಗಳ ಹಣಗಳು ಕೆಲವು ಖಾತೆಗಳನ್ನು ತಲುಪುತ್ತಿಲ್ಲ. ಅಲ್ಲದೆ, ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಹಾಲಿನ ದರ ಏರಿಕೆ ಮಾಡಲಾಗಿದ್ದು, ಬಸ್ ದರ ಏರಿಕೆಗೆ ಚಿಂತನೆ ನಡೆಸಲಾಗುತ್ತಿದೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.

ಈಗಾಗಲೇ ಹಾಲಿನ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ವಿನೂತನವಾಗಿ ಬಿಜೆಪಿ ಪ್ರತಿಭಟನೆ ಕೈಗೊಂಡಿದೆ. ಬಿಜೆಪಿಯ ಎಲ್ಲ ನಾಯಕರು, ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣವನ್ನು ಖಂಡಿಸಿ ಬಿಜೆಪಿ ಶುಕ್ರವಾರ ರಾಜ್ಯಾಧ್ಯಂತ ಪ್ರತಿಭಟನೆಯನ್ನು ನಡೆಸಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದಿದೆ. ಈ ವೇಳೆ ಸಿಎಂ ರಾಜೀನಾಮೆಗೂ ಬಿಜೆಪಿ ಆಗ್ರಹಿಸಿದೆ. ಹೀಗೆ ಹೋರಾಟಗಳನ್ನು ಜೀವಂತವಾಗಿಟ್ಟುಕೊಂಡು ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಕಾಂಗ್ರೆಸ್ ನ ಒಳ ಕಿತ್ತಾಟವನ್ನು ಜನರ ಮುಂದೆ ಬಂದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಮೈತ್ರಿ ಮುಂದಾಗಿದೆ.
ಉಪಚುನಾವಣೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗಳು ರಾಜ್ಯದಲ್ಲಿ ಸದ್ಯದಲ್ಲಿಯೇ ನಡೆಯಲಿವೆ. ಹೀಗಾಗಿ ವಿರೋಧ ಪಕ್ಷ, ಆಡಳಿತ ಪಕ್ಷದ ವಿಕ್ನೆಸ್ ನ್ನು ಬೀದಿಗೆ ತಂದು ಲಾಭ ಮಾಡಿಕೊಳ್ಳಲು ಸಂಚು ರೂಪಿಸಿವೆ. ಇನ್ನೊಂದೆಡೆ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಎಲ್ಲ ಪವರ್ ನೀ ಗೋ ಅಹೆಡ್ ಅಂದಿದೆ. ಇದು ಕೂಡ ಬಿಜೆಪಿಗೆ ಶಕ್ತಿ ನೀಡಿದಂತಾಗಿದೆ.