ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ಜೈಲು ಸೇರಿದೆ. ಈಗ ಅವರಿಗೆ ಈ ಪ್ರಕರಣದಿಂದ ಹೊರಗೆ ಬಿರುವುದು ಅಷ್ಟು ಸುಲಭವಲ್ಲ. ಇದು ಗಂಭೀರ ಆರೋಪವಾಗಿರುವುದರಿಂದಾಗಿ ಆಪ್ತರು ಏನೂ ಮಾತನಾಡದೆ ಸೈಲೆಂಟ್ ಆಗಿದ್ದಾರೆ. ದರ್ಶನ್ ಪರ ಪೋಸ್ಟ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಅವರನ್ನು ಬೆಂಬಲಿಸಿದವರು ಟ್ರೋಲ್ ಆಗುತ್ತಿದ್ದಾರೆ. ಈಗ ದರ್ಶನ್ ಬೆಂಬಲಿಸಿ ಪೋಸ್ಟ್ ಹಾಕಿದ್ದ ನಾಗ ಶೌರ್ಯ ಟೀಕೆಗೆ ಗುರಿಯಾಗಿದ್ದಾರೆ.
ನಾಗಶೌರ್ಯ ಹಾಗೂ ದರ್ಶನ್ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ಹೀಗಾಗಿ ನಾಗ ಶೌರ್ಯ ಅವರು ಪೋಸ್ಟ್ ಒಂದನ್ನು ಮಾಡಿದ್ದರು. ‘ದರ್ಶನ್ ಕನಸಿನಲ್ಲೂ ಯಾರಿಗೂ ಕೆಟ್ಟದನ್ನು ಬಯಸುವವರಲ್ಲ’ ಎಂದು ಪೋಸ್ಟ್ ಮಾಡಿದ್ದರು. ಜೊತೆಗೆ ದರ್ಶನ್ ಮಾಡಿದ ಒಳ್ಳೆಯ ಕೆಲಸಗಳನ್ನು ಬೆಂಬಲಿಸಿದ್ದರು. ಈಗಲೇ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದು ಹೇಳಿದ್ದರು.
ದರ್ಶನ್ ಪ್ರಕರಣ ಇನ್ನೂ ತನಿಖೆಯಲ್ಲಿದೆ. ಅವರು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ. ಈ ಕಾರಣದಿಂದಲೇ ದರ್ಶನ್ ಆಪ್ತಾರದ ಸುಮಲತಾ ಅಂಬರೀಷ್, ರಾಕ್ಲೈನ್ ವೆಂಕಟೇಶ್ ಸೇರಿ ಅನೇಕರು ಮೌನ ತಾಳಿದ್ದಾರೆ. ನಾಗಶೌರ್ಯ ಅವರು ದರ್ಶನ್ನ ಬೆಂಬಲಿಸಿ ಸುಖಾಸುಮ್ಮನೆ ಟೀಕೆಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಇದರಿಂದ ಸಿಟ್ಟಾದ ದರ್ಶನ್ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು ಎಂಬ ಆರೋಪದಡಿ ಅರೆಸ್ಟ್ ಆಗಿ ಜೈಲಿನಲಲ್ಲಿದ್ದಾರೆ.