ಹಾಸನ: ಅಹಸಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ವಿಪ ಸದಸ್ಯ ಡಾ. ಸೂರಜ್ ರೇವಣ್ಣ (Suraj Revanna Case) ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣವನ್ನು ಕೂಡ ಸಿಐಡಿಗೆ ಹಸ್ತಾಂತರಿಸಲಾಗಿದೆ.
ಸಿಐಡಿ(CID)ಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸೂರಜ್ ವಿರುದ್ಧ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಜೂ.22 ರಂದು ಮೊದಲ ಪ್ರಕರಣ ದಾಖಲಾಗಿತ್ತು. ಮಾರನೇ ದಿನ ಜೂ.23ರಂದು ಪ್ರಕರಣವನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶಿಸಿತ್ತು.
ಆದರೆ, ಹೊಳೆನರಸೀಪುರ ಗ್ರಾ. ಠಾಣೆಯಲ್ಲಿ ಜೂನ್ 25ರಂದು ಮತ್ತೊಂದು ಕೇಸ್ ದಾಖಲಾಯಿತು. ಹೀಗಾಗಿ ಈ ಕೇಸ್ ನ್ನು ಕೂಡ ಸಿಐಡಿಗೆ ಹಸ್ತಾಂತರ ಮಾಡಿ ಆದೇಶಿಸಲಾಗಿದೆ. ಮೊದಲ ಪ್ರಕರಣದಲ್ಲಿ ಅರಕಲಗೂಡು ಮೂಲದ ಯುವಕ ದೂರು ನೀಡಿದ್ದರೆ, 2ನೇ ಪ್ರಕರಣದಲ್ಲಿ ಹೊಳೆನರಸೀಪುರ ಮೂಲದ ಯುವಕ ದೂರು ನೀಡಿದ್ದ. ಸದ್ಯ ಎರಡೂ ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.