ಇತ್ತೀಚೆಗೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹಾಗೂ ವಿಕೃತಿ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದಾಗಿ ಹೆಣ್ಣು ಮಕ್ಕಳು ಸಮಾಜದಲ್ಲಿ ನೆಮ್ಮದಿಯಿಂದ ಬದುಕುವಂತಾಗುತ್ತಿಲ್ಲ. ಇಲ್ಲೊಬ್ಬ ಪಾಪಿ ಯುವತಿ ಮುಂದೆ ಹಸ್ತಮೈಥುನ ಪ್ರದರ್ಶಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
ರಸ್ತೆಯಲ್ಲಿ ಯುವತಿಯೊಬ್ಬಳು ಬರುತ್ತಿರುವುದನ್ನು ಕಂಡ ಕಾಮುಕನೊಬ್ಬ ಬೈಕ್ ನಿಲ್ಲಿಸಿ, ಯುವತಿಯ ಎದುರೇ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಈ ಪಾಪಿಯ ವಿಕೃತಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದ ಬಸಿರ್ಹತ್ ಎಂಬಲ್ಲಿ ಈ ನಾಚಿಕೆಗೇಡಿನ ಕೃತ್ಯ ನಡೆದಿದೆ. ವಿಕೃತ ಪಾಪಿ ಬೈಕ್ ನಿಲ್ಲಿಸಿ ನಡು ರಸ್ತೆಯಲ್ಲಿಯೇ ಯುವತಿ ಮುಂದೆ ಹಸ್ತಮೈಥುನ ಮಾಡಿದ್ದಾನೆ. ಈ ಕೃತ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಮುಕನ ಈ ಅಸಭ್ಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸಿರಾಜ್ (@sirajnoorani) ಎಂಬ ವ್ಯಕ್ತಿ ಈ ಪೋಸ್ಟ್ ಹಂಚಿಕೊಂಡಿದ್ದು, “ಹೆಣ್ಣು ಮಕ್ಕಳಿಗೆ ರಸ್ತೆಯಲ್ಲಿ ಓಡಾಡಲು ಕೂಡಾ ಕಷ್ಟವಾಗಿಬಿಟ್ಟಿದೆ ನೋಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾಮುಕನೊಬ್ಬ ಯುವತಿ ಮುಂದೆ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿರುವ ದೃಶ್ಯ ಕಾಣಬಹುದು.
ಯುವತಿಯೊಬ್ಬಳು ಬರುತ್ತಿರುವುದನ್ನು ಕಂಡ ಬೈಕ್ ಸವಾರ ಅಲ್ಲೇ ಬೈಕ್ ನಿಲ್ಲಿಸಿ, ಯುವತಿ ತನ್ನ ಹತ್ತಿರ ಬರುವವರೆಗೂ ಕಾದೂ, ಆಕೆ ಬಂದ ಕೂಡಲೇ ಅವಳ ಮುಂದೆ ಹಸ್ತ ಮೈಥುನ ಮಾಡಿಕೊಂಡು ಅಸಭ್ಯವಾಗಿ ಆತ ವರ್ತಿಸಿದ್ದಾನೆ. ಈತನ ವರ್ತನೆಯಿಂದ ಭಯಭೀತಳಾದ ಯುವತಿ ಅಲ್ಲಿಂದ ಓಡಿ ಹೋಗಿದ್ದಾಳೆ.