ಮುಂಬೈ: ಆಸ್ಟ್ರೇಲಿಯಾ (Australia)ದ ಆಟಗಾರ ಡೇವಿಡ್ ವಾರ್ನರ್ (David Warner) ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ.
ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ (David Warner) 8 ರನ್ ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದ ಸೋಲಿನೊಂದಿಗೆ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ಆದರೆ, ಡೇವಿಡ್ ವಾರ್ನರ್ ಅಧಿಕೃತವಾಗಿ ಎಲ್ಲಿಯೂ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿಲ್ಲ. ಆದರೆ ಟಿ20 ವಿಶ್ವಕಪ್ ಕ್ರಿಕೆಟ್ ಆರಂಭಕ್ಕೂ ಮುನ್ನ ಈ ವಿಶ್ವಕಪ್‌ನಲ್ಲಿ ನಾನು ಕೊನೆಯ ಬಾರಿ ಆಸ್ಟ್ರೇಲಿಯಾದ ಜರ್ಸಿ ಧರಿಸಿ ಆಡಲಿದ್ದೇನೆ ಎಂದು ಹೇಳುವ ಮೂಲಕ ನಿವೃತ್ತಿಯ ಸುಳಿವು ನೀಡಿದ್ದಾರೆ.
ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದರೂ ಎಲ್ಲಾ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳುತ್ತಾರಾ ಎಂಬುವುದು ಮಾತ್ರ ಗೊತ್ತಾಗಿಲ್ಲ. ಸದ್ಯ ಐಪಿಎಲ್‌ನಲ್ಲಿ (IPL) ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪರ ಆಡುತ್ತಿದ್ದಾರೆ.
ಸೋಮವಾರ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ಸೋಲು ಕಂಡಿತ್ತು. ಬಾಂಗ್ಲಾದೇಶದ ವಿರುದ್ಧ ಅಪ್ಘಾನಿಸ್ತಾನ್ ಸೋತಿದ್ದರೆ, ರನ್ ರೇಟ್ ಆಧಾರದ ಮೇಲೆ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಬಹುದಿತ್ತು. ಆದರೆ ಅಫ್ಘಾನಿಸ್ತಾನ ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಿ, ಸೆಮಿಸ್ ಪ್ರವೇಶಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಬಾಗಿಲು ಬಂದ್ ಆಗಿದೆ.
ಭಾರತದ ವಿರುದ್ಧ ಪಂದ್ಯದಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿದಿದ್ದ ಡೇವಿಡ್ ವಾರ್ನರ್ 6 ರನ್ ಗಳಿಸಿ ಔಟ್ ಆಗಿದ್ದರು. 37 ವರ್ಷದ ಡೇವಿಡ್ ವಾರ್ನರ್ 161 ಏಕದಿನ ಪಂದ್ಯಗಳ 159 ಇನ್ನಿಂಗ್ಸ್ ಆಡಿ 6,932 ರನ್ ಗಳಿಸಿದ್ದಾರೆ. 112 ಟೆಸ್ಟ್ ಪಂದ್ಯಗಳ 205 ಇನ್ನಿಂಗ್ಸ್ ನಲ್ಲಿ 8,786 ರನ್ ಗಳಿಸಿದ್ದಾರೆ. 110 ಟಿ20 ಪಂದ್ಯಗಳ 110 ಇನ್ನಿಂಗ್ಸ್‌ನಲ್ಲಿ 3,277 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.