ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಜೈಲು ಪಾಲಾಗಿದ್ದಾರೆ. ಈಗ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ (Chitral Rangaswamy) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ರೇಣುಕಾಸ್ವಾಮಿಯ ಫೇಕ್ ಅಕೌಂಟ್‌ಗಳಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು ಎಂದು ಸೋಷಿಯಲ್ ಮೀಡಿಯಾ ಮೂಲಕ ಹೇಳಿದ್ದಾರೆ. ಪ್ರಸ್ತುತ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಅರಿವಿದೆ. ನಾನು ಯಾರಿಗೂ ಸಪೋರ್ಟ್ ಮಾಡುವುದಕ್ಕೆ ಬಂದಿಲ್ಲ. ರೇಣುಕಾಸ್ವಾಮಿ ಫ್ಯಾಮಿಲಿಗೆ ದೇವರು ಆದಷ್ಟು ಶಕ್ತಿ ಕೊಡಲಿ. ಆದರೆ ಈ ರೇಣುಕಾಸ್ವಾಮಿ ಇನ್ನೂ ಒಂದಿಬ್ಬರಿಗೆ ಇದೇ ಮೆಸೇಜ್ ಕಳುಹಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ದೂರು ಕೂಡ ದಾಖಲಾಗಿತ್ತು. ಅವರು ಮೆಸೇಜ್ ಕಳುಹಿಸುತ್ತಿದ್ದ ಅಕೌಂಟ್ goutham_ks_1990 ಈ ಹೆಸರಿನಲ್ಲಿ ಇತ್ತು ಎಂಬುದನ್ನು ನಾನು ನ್ಯೂಸ್‌ನಲ್ಲಿ ನೋಡಿದ್ದೆ ಎಂದು ಚಿತ್ರಾಲ್ ಬರೆದುಕೊಂಡಿದ್ದಾರೆ.
ಏನು ಹೇಳುವುದು ಗೊತ್ತಾಗುತ್ತಿಲ್ಲ. ಅಷ್ಟೊಂದು ಚೆನ್ನಾಗಿರುವ ಹೆಂಡತಿ ಇರುವಾಗ, ಬೇರೆಯವರಿಗೆ ಈ ರೀತಿ ಮೆಸೇಜ್ ಕಳುಹಿಸುವುದು ಯಾಕೆ ಬೇಕಿತ್ತು. ಸುಮಾರು ಜನರಿಗೆ ಇದೆಲ್ಲಾ ಕಾಮನ್ ಎಂದುಕೊಳ್ಳಬಹುದು. ಆದರೆ ಆ ರೀತಿ ಮೆಸೇಜ್‌ಗಳನ್ನು ನೋಡಿದಾಗ, ಏನಪ್ಪಾ ಇದು ಥೂ ಅಂತ ಅನ್ನಿಸುತ್ತದೆ. ನಾನು ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ಆದರೆ ಇನ್ನೊಬ್ಬರ ಪರ್ಸನಲ್ ವಿಷಯಗಳ ಬಗ್ಗೆ ಕಾಮೆಂಟ್ ಸೆಕ್ಷನ್‌ನಲ್ಲಿ ಕಾಮೆಂಟ್ ಹಾಕಿ ಜಡ್ಜ್ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಜೀವನವನ್ನು ನೀವು ನೋಡಿಕೊಳ್ಳಿ ಎಂದು ನಟಿ ಮಾತನಾಡಿದ್ದಾರೆ. ನನ್ನ ಬ್ಲಾಕ್ ಲಿಸ್ಟ್ ಅಲ್ಲೂ ಆ ಅಕೌಂಟ್ ಇದೆ ಎಂದರೆ, ನನಗೆ ಅದರಿಂದ ಅಶ್ಲೀಲವಾದ ಮೆಸೇಜ್ ಅಥವಾ ಫೋಟೋ ಬಂದಿದೆ. ಅದಕ್ಕೆ ಅದನ್ನು ಬ್ಲಾಕ್ ಮಾಡಿರುತ್ತೇನೆ. ಆ ಅಕೌಂಟ್‌ನಿಂದ ಅಶ್ಲೀಲವಾದ ಮೆಸೇಜ್ ಬರದೇ ನಾನು ಅದನ್ನು ಬ್ಲಾಕ್ ಮಾಡುವುದಿಲ್ಲ ಎಂದು ‘ರಾಧಾ ಕಲ್ಯಾಣ’ (Radha Kalyan Serial) ನಟಿ ಚಿತ್ರಾಲ್ ಹೇಳಿದ್ದಾರೆ