ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಆಂಡ್ ಗ್ಯಾಂಗ್ ನ್ನು ಪರಪ್ಪನ ಅಗ್ರಹಾರಕ್ಕೆ ಹಾಕಲಾಗಿದೆ. ಈ ಮಧ್ಯೆ ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ಪ್ರತಿಕ್ರಿಯೆ ನೀಡಿದ್ದಾರೆ.
ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ದರ್ಶನ್ (Darshan) ಸಣ್ಣ ಕಾರಣಕ್ಕೆ ಹೀಗೆಲ್ಲಾ ಮಾಡಿಕೊಂಡರು. ರೇಣುಕಾಸ್ವಾಮಿ ಮೆಸೇಜ್ ಮಾಡಿರುವುದು ಅಷ್ಟೇ. ಅದು ಸಣ್ಣ ವಿಚಾರ. ರೇಣುಕಾಸ್ವಾಮಿ ಮೇಲೆ ಆಗಿರುವ ಪ್ರಯೋಗ ತುಂಬಾ ತಪ್ಪು ಅನಿಸಿತು. ಇಂತಹ ತಪ್ಪು ಮಾಡಿದವರು ಯಾರೇ ಆದರೂ ಅವರಿಗೆ ತಕ್ಕ ಶಿಕ್ಷೆಯಾಗಲಿ. ಕರ್ನಾಟಕ ಪೊಲೀಸ್ ವಿಚಾರಣೆ ಮಾಡಿರುವ ರೀತಿ, ಅವರು ಇಟ್ಟಿರುವ ಹೆಜ್ಜೆ ಗ್ರೇಟ್ ಆಗಿದೆ ಎಂದು ಓಂ ಪ್ರಕಾಶ್ ಹೇಳಿದ್ದಾರೆ.

ನಟ ದರ್ಶನ್ ಆರೋಪಿ ಸ್ಥಾನದಲ್ಲಿ ನಿಂತಿರುವುದು ತುಂಬಾ ನೋವಾಗುತ್ತಿದೆ. ಈಗ ದರ್ಶನ್‌ರನ್ನು ಭೇಟಿ ಮಾಡದೇ 10 ವರ್ಷಗಳಾಗಿವೆ. ಆದರೆ ಅವರು ಒಳ್ಳೆಯ ವ್ಯಕ್ತಿ. ಕನ್ನಡಿಗರಿಗೆ ಅವಕಾಶ ಸಿಗಬೇಕು ಎಂಬ ಮನೋಭಾವನೆ ಅವರಿಗಿದೆ. ಕೆಲ ವೈಯಕ್ತಿಕ ಕಾರಣಗಿಳಿಂದ ನಾವು ಅವರಿಂದ ದೂರಾದೇವು ಎಂದು ಹೇಳಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ನಾನೇ ದರ್ಶನ್ ಅವರೊಂದಿಗೆ ಮಾತನಾಡಿದೆ. ಸಾರಿ ಕೇಳಿದೆ. ಒಟ್ಟಿಗೆ ಸೇರಿ ಸಿನಿಮಾ ಮಾಡೋಣ ಅಂತ ಕೇಳಿದ್ದೆ. ಡೇಟ್ಸ್ ವಿಚಾರವಾಗಿ ಹೊಂದಾಣಿಕೆ ಆಗಲಿಲ್ಲ. ಈಗ ಮಾಡುತ್ತಿರುವ ‘ಫಿನಿಕ್ಸ್’ ಸಿನಿಮಾ ಅವರಿಗಾಗಿಯೇ ಮಾಡಿದ್ದು ಶೇ. 60ರಷ್ಟು ಚಿತ್ರೀಕರಣ ಆಗಿದೆ. ಈಗಲೂ ಶೂಟಿಂಗ್ ನಡೆಯುತ್ತಿದೆ ಎಂದರು.
ರೇಣುಕಾಸ್ವಾಮಿ ಮಾಡಿರುವುದು ಘನಘೋರ ಅಪರಾಧವಲ್ಲ. ಪೊಲೀಸ್ ಅಧಿಕಾರಿಗಳ ಸಹಾಯ ತೆಗೆದುಕೊಂಡು ಸರಿ ಮಾಡಬಹುದಿತ್ತು. ಆ ಥರ ಚಿತ್ರಹಿಂಸೆ ಕೊಡಬಾರದಿತ್ತು. ದೊಡ್ಡ ನಟನಾಗಿ ಈ ಸ್ಥಾನದಲ್ಲಿ ನಿಲ್ಲಬಾರದಿತ್ತು ಎಂದು ಹೇಳಿದ್ದಾರೆ.
