ಮೈಸೂರು: ಆನ್ ಲೈನ್ ಟ್ರೇಡಿಂಗ್ (Online Trading) ಹೆಸರಿನಲ್ಲಿ ಉದ್ಯಮಿಗೆ 2.96 ಕೋಟಿ ರೂ. ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. 30 ವರ್ಷ ವಯಸ್ಸಿನ ವ್ಯಾಪಾರಿಯೊಬ್ಬರಿಗೆ ಖದೀಮರು ಪಂಗನಾಮ ಹಾಕಿದ್ದಾರೆ. ವಂಚನೆಗೊಳಗಾದ ವ್ಯಕ್ತಿ ಆನ್‌ಲೈನ್ ಟ್ರೇಡಿಂಗ್, ಷೇರ್ ಮಾರ್ಕೆಟಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು. ಆದರೆ, ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ಒಂದು ತಿಂಗಳಲ್ಲಿ ಹಣ ದ್ವಿಗುಣ ಆಗುವ ಆಸೆ ಹೊಂದಿದ್ದರು.
ಹೀಗಾಗಿ ಆನ್‌ಲೈನ್‌ನಲ್ಲಿ ಅವರು ಕೇಳಿದ ಎಲ್ಲಾ ಬ್ಯಾಂಕ್ ಡಿಟೇಲ್ಸ್, ಎಟಿಎಂ ಕೋಡ್, ಆಧಾರ್ ನಂಬರ್ ಮತ್ತಿತರ ಮಾಹಿತಿಗಳನ್ನು ಅಪ್ ಲೋಡ್ ಮಾಡಿ ಮೋಸ ಹೋಗಿದ್ದಾರೆ. ಸತತ ನಾಲ್ಕು ದಿನಗಳ ಕಾಲ ಆನ್‌ಲೈನ್ ಬ್ಯಾಂಕ್‌ಗೆ ಸಂಬಂಧಪಟ್ಟ ಮಾಹಿತಿ ಹಂಚಿಕೊಂಡಿದ್ದರು. ಆದರೆ, ಬ್ಯಾಂಕ್ ಖಾತೆಯಿಂದ ಏಕಾಏಕಿ 2.96 ಕೋಟಿ ವರ್ಗಾವಣೆ ಆಗಿದೆ. ಆಗ ಮೋಸ ಹೋಗಿರುವುದು ಅರಿವಾಗಿದೆ. ಕೂಡಲೇ ನಜರಾಬಾದ್ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಒಬ್ಬನೇ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದರಾ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.