ಕೊಪ್ಪಳ: ಕೇದಾರನಾಥ (Kedarnath) ಯಾತ್ರೆಗೆ ತೆರಳಿದ್ದ ಅರ್ಚಕರು ಹೃದಯಾಘಾತಕ್ಕೆ(Kedarnath) ಬಲಿಯಾಗಿರುವ ಘಟನೆಯೊಂದು ನಡೆದಿದೆ.
ಕೊಪ್ಪಳದ (Koppal) ಅರ್ಚಕ ಸಿದ್ದಯ್ಯ ಹಿರೇಮಠ(32) ಕೊಲೆಯಾಗಿರುವವರು. ಈ ಘಟನೆ ಋಷಿಕೇಶ್ ನಲ್ಲಿ ನೆದಿದೆ. ಅರ್ಚಕ ಜೂ.10 ರಂದು ಅವರು ಕೇದಾರನಾಥ ಯಾತ್ರೆಗೆ ತೆರಳಿದ್ದರು. ಕಳೆದ ಹತ್ತು ದಿನಗಳಿಂದ ವಿವಿಧ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುತ್ತಿದ್ದರು. ಕೇದಾರನಾಥ್ ದರ್ಶನ ಮುಗಿಸಿಕೊಂಡು ಋಷಿಕೇಶ್‍ಗೆ ಬಂದಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದೆ.
ಸಿದ್ದಯ್ಯ ಅವರು ಮೊದಲು ಗವಿಸಿದ್ದೇಶ್ವರ ಮಠದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು ಎನ್ನಲಾಗಿದೆ.