ನವದೆಹಲಿ: 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯಲ್ಲಿ ಜೂ. 19ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 14 ಖಾರಿಫ್ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಅನುಮೋದನೆ ಸಿಕ್ಕಿದೆ.
ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳಿಗೆ ಎಂಎಸ್‌ಪಿಯಲ್ಲಿ ಅತ್ಯಧಿಕ ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ನೈಜರ್‌ಬೀಡ್ (ಕ್ವಿಂಟಲ್‌ಗೆ 983 ರೂ. ಹೆಚ್ಚಳ), ಎಳ್ಳು (ಕ್ವಿಂಟಲ್‌ಗೆ 632 ರೂ. ಹೆಚ್ಚಳ) ಮತ್ತು ಅರ್ಹರ್ ದಾಲ್ (ಕ್ವಿಂಟಲ್‌ಗೆ 550 ರೂ. ಹೆಚ್ಚಳ) ಎಂದು ಅದು ಹೇಳಿದೆ. ನೈಜರ್‌ಸೀಡ್ ಮೇಲಿನ ಎಂಎಸ್‌ಪಿಯನ್ನು 5,811 ರೂ.ನಿಂದ 8,717 ರೂ.ಗೆ ಹೆಚ್ಚಿಸಲಾಗಿದ್ದು, ಸೆಸಮುಮ್‌ನ ಎಂಎಸ್‌ಪಿ 6,178 ರೂ.ನಿಂದ 9,267 ರೂ.ಗೆ ಮತ್ತು ಅರ್ಹರ್ ದಾಲ್ ಮೇಲಿನ ಎಂಎಸ್‌ಪಿ 4,761 ರೂ.ನಿಂದ 7,550 ರೂ.ಗೆ ಏರಿಸಲು ನಿರ್ಧರಿಸಲಾಗಿದೆ.
ಭತ್ತದ ಮೇಲಿನ ಎಂಎಸ್‌ಪಿಯನ್ನು 1,533 ರೂ.ನಿಂದ 2,300 ರೂ.ಗೆ ಹೆಚ್ಚಿಸಲಾಗಿದ್ದು, ಜೋವರ್ ಮೇಲಿನ ಎಂಎಸ್‌ಪಿ 2,247 ರೂ.ನಿಂದ 3,371 ರೂ.ಗೆ ಏರಿಸಲು ಸಂಪುಟ ನಿರ್ಧರಿಸಿದೆ.
ಕೇಂದ್ರ ಸಚಿವ ಸಂಪುಟವು ಇಂದು ಭತ್ತ, ರಾಗಿ, ಬಾಜ್ರಾ, ಜೋಳ, ಮೆಕ್ಕೆಜೋಳ ಮತ್ತು ಹತ್ತಿ ಸೇರಿದಂತೆ 14 ಖಾರಿಫ್ ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಘೋಷಿಸಿದೆ. ನಂತರ ಸಚಿವ ಸಂಪುಟದ ನಿರ್ಧಾರದ ಕುರಿತು ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾಹಿತಿ ನೀಡಿದರು. ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುವ ಪಿಎಂ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದ್ದರು. ದರು. ಮಂಗಳವಾರ ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ಸುಮಾರು 9.26 ಕೋಟಿ ಫಲಾನುಭವಿ ರೈತರಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ 17ನೇ ಕಂತನ್ನು ನೇರ ಲಾಭ ವರ್ಗಾವಣೆ ಮೂಲಕ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.