ನವದೆಹಲಿ:: ಇಂದು ರೈತರ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) 17ನೇ ಕಂತಿನ ಹಣ ಬಿಡುಗಡೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಾರಣಾಸಿಯಲ್ಲಿ ಅಧಿಕೃತವಾಗಿ ಹಣ ಬಿಡುಗಡೆ ಮಾಡಲಿದ್ದಾರೆ. ಮಂಗಳವಾರ ಸಂಜೆಯ ಒಳಗೆ 9.3 ಕೋಟಿ ರೈತರ ಖಾತೆಗಳಿಗೆ ಒಟ್ಟು 20,000 ಕೋಟಿ ರೂ ಹಣ ಜಮೆ ಆಗಲಿದೆ. ಪ್ರತಿಯೊಂದು ಖಾತೆಗೂ 2,000 ರೂ ಹಣ ವರ್ಗಾವಣೆ ಮಾಡಲಾಗುತ್ತದೆ.
ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ ಒಟ್ಟು 6 ಸಾವಿರ ನೀಡಲಾಗುತ್ತದೆ. ತಲಾ 2 ಸಾವಿರ ರೂ.ಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಆರು ಸಾವಿರ ರೂ ಅನ್ನು ಜಮೆ ಮಾಡಲಾಗುತ್ತದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರ 16 ಕಂತುಗಳ ಹಣ ಬಿಡುಗಡೆ ಮಾಡಿದೆ. ಇವತ್ತು 17ನೇ ಕಂತಿನ ಹಣ ವರ್ಗಾವಣೆ ಮಾಡಲಿದೆ.
