ಚಿಕ್ಕೋಡಿ: ಆಸ್ತಿಗಾಗಿ ಸಹೋದರನೇ ತಮ್ಮನನ್ನು ಕೊಲೆ ಮಾಡಿಸಿರುವ ಘಟನೆ ನಡೆದಿದೆ.
ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಪ್ರಕರಣ ಬೆಳಗಾವಿಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ (Belagavi) ಸುಲ್ತಾನಪುರ ಗ್ರಾಮದ ಈರಪ್ಪ ಚೌಗಲಾ (24) ಹತ್ಯೆಯಾಗಿರುವ ದುರ್ದೈವಿ ಯುವಕ. ಕೇವಲ ಒಂದು ಎಕರೆ ಜಮೀನಿಗಾಗಿ ಈರಪ್ಪನನ್ನು ಆತನ ಸಹೋದರ ಶ್ರೀಶೈಲ್ ಚೌಗಲಾ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ.
ಜೂ.4ರ ಸಂಜೆ 9 ಗಂಟೆ ವೇಳೆಗೆ ತೋಟದ ಮನೆ ಕಡೆಗೆ ತೆರಳುವಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈರಪ್ಪನನ್ನ ಅಪಹರಿಸಿದ್ದರು. ನಂತರ ಬಾಗಲಕೋಟೆಯ (Bagalkote) ಕೋಲಾರ್ ಜಾಕ್ವೆಲ್ ಹತ್ತಿರ ಕೊಲೆ ಮಾಡಿ ಮೃತದೇಹ ಎಸೆದು ಹೋಗಿದ್ದರು.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಜನ ಆರೋಪಿಗಳನ್ನು ಹಾರೋಗೇರಿ ಪೊಲಿಸರು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಈರಪ್ಪನ ಸಹೋದರನೇ ಸುಪಾರಿ ಕೊಟ್ಟಿರುವುದಾಗಿ ಹೇಳಿದ್ದಾರೆ. ಈ ಕುರಿತು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.