ನಟ ದರ್ಶನ್ (Darshan) ಮಗ ತಂದೆಗೆ ಐ ಲವ್ ಯೂ ಎಂದು ಹೇಳುವ ಮೂಲಕ ತಂದೆಯ ದಿನದಂದು ಭಾವುಕವಾಗಿ ಪೋಸ್ಟ್ ಮಾಡಿದ್ದಾನೆ. ಅಲ್ಲದೇ, ಎಂದೆಂದಿಗೂ ನೀವು ನನ್ನ ಹೀರೋ ಎಂದು ಹೇಳಿದ್ದಾನೆ.
ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪೊಲೀಸರ ವಶದಲ್ಲಿದ್ದಾರೆ. ಈ ನೋವಿನಲ್ಲಿಯೂ ಪುತ್ರ ವಿನೀಶ್ ತಂದೆಗೆ ವಿಶ್ ಮಾಡಿದ್ದಾನೆ. ‘ಐ ಲವ್ ಯೂ’ ಯಾವಾಗಲೂ ನೀವೇ ನನ್ನ ಹೀರೋ ಅಪ್ಪ ಎಂದು ವಿಶ್ ಮಾಡಿದ್ದಾನೆ.
ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಐ ಲವ್ ಯು. ಯಾವಾಗಲೂ ನೀವೇ ನನ್ನ ಹೀರೋ ಎಂದು ವಿನೀಶ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಅಲ್ಲದೇ, ತಂದೆಯ ಜೊತೆಗೆ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾನೆ.
ಇತ್ತೀಚೆಗಷ್ಟೇ ನನ್ನ ತಂದೆಯ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಮಾಡಿ, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು ಎಂದು ವಿನೀಶ್ ಬರೆದುಕೊಂಡಿದ್ದ. ನಾನು 15 ವರ್ಷದ ಬಾಲಕ, ನನಗೂ ಭಾವನೆಗಳಿವೆ ಎಂಬುವುದನ್ನು ನೀವು ಪರಿಗಣಿಸಲೇ ಇಲ್ಲ. ಇಂತಹ ಕೆಟ್ಟ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ನನಗೆ ಶಾಪ ಹಾಕುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ತಂದೆಯ ಬಂಧನ, ಜನರ ಆಕ್ರೋಶ, ಕೆಟ್ಟ ಕಾಮೆಂಟ್ ಗಳ ಕುರಿತು ಬೇಸರಗೊಂಡು ಪೋಸ್ಟ್ ಮಾಡಿದ್ದ. ಈಗ ತಂದೆಗೆ ವಿಶ್ ಮಾಡಿದ್ದಾನೆ.