ದರ್ಶನ್ ಹಾಗೂ ಗ್ಯಾಂಗ್ ಕೃತ್ಯಕ್ಕೆ (Renukaswamy Murder Case) ನಟಿ ರಮ್ಯಾ (Sandalwood Queen Ramya) ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಟರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಸಮಾಜಕ್ಕೆ ಮಾದರಿಯಾಗಿರಬೇಕು. ಅಭಿಮಾನಿಗಳನ್ನು ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಇಂತಹದ್ದನ್ನು ಸಮರ್ಥಿಸಿಕೊಂಡರೆ ಸಮಾಜಕ್ಕೆ ನಾವು ಕೊಡುವ ಸಂದೇಶ ಏನು? ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಪೊಲೀಸರು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂದು ನಂಬಿದ್ದೇವೆ ಎಂದು ಹೇಳಿದ್ದಾರೆ.
ನಮಗೆ ಬ್ಲಾಕ್ (Block) ಎನ್ನುವ ಆಯ್ಕೆ ಇದೆ. ಎಲ್ಲರಿಗೂ ಈ ಆಯ್ಕೆ ಇದೆ. ಯಾರಾದರೂ ಟ್ರೋಲ್ ಮಾಡುತ್ತಿದ್ದರೆ ಮೊದಲು ಬ್ಲಾಕ್ ಮಾಡಿ. ನಾನು ಕೂಡ ಹಲವರ ವಿರುದ್ಧ ದೂರು ನೀಡಿದ್ದೆ. ನಂತರ ನಾನೇ ಕೇಸ್ ಹಿಂಪಡೆದೆ. ಹಲವು ಪ್ರಕರಣಗಳಲ್ಲಿ ದರ್ಶನ್ ರಾಜಕೀಯ ಪ್ರಭಾವ ಬೀರಿರಬಹುದು. ಆದರೆ ಈ ಹಂತದಲ್ಲಿ ರಾಜಕೀಯ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ದುರ್ಘಟನೆ ಈಗ ನಟೋರಿಯಸ್ ಆಗಿದೆ. ರೌಡಿ ಎಲಿಮೆಂಟ್ ಇರುವ ಹಿನ್ನೆಲೆ ಜನರ ಗಮನ ಸೆಳೆದಿದೆ. ದರ್ಶನ್‌ಗಿಂತ ಅಧಿಕ ಅಭಿಮಾನಿಗಳಿರುವ ನಟರಿದ್ದಾರೆ. ನಾನು ವೀಡಿಯೋ ನೋಡಿದೆ. ರಾಡ್‌ನಿಂದ ತಲೆಗೆ ಹೊಡೆದಿದ್ದಾರೆ. ಸೆಲೆಬ್ರಿಟಿಗಳು ಚಾರಿಟಿ ಅಥಾವ ಇನ್ಯಾವುದೇ ಒಳ್ಳೆ ಮಾರ್ಗದ ಮೂಲಕ ಸಮಾಜಕ್ಕೆ ಉತ್ತಮವಾದದನ್ನು ನೀಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
