ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಈ ಸಂದರ್ಭದಲ್ಲಿ ಅವರು ಕಿರಿಕ್ ಮಾಡಿಕೊಂಡಿರುವ ಹಳೆಯ ವಿಡಿಯೋಗಳು, ಘಟನೆಗಳು ವೈರಲ್ ಆಗುತ್ತಿವೆ. ನೊಂದವರು ಕರ್ಮ ರಿಟರ್ನ್ ಅನ್ನುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೂಡ ಹಿಂದೆ ದರ್ಶನ್ ರಿಂದ ತಗಡು ಅನಿಸಿಕೊಂಡಿದ್ದರು. ಅಭಿಮಾನಿಗಳು ಪೋಸ್ಟ್ ಮಾಡುತ್ತಿರುವ ವಿಡಿಯೋ, ಪೋಸ್ಟ್ ಗಳನ್ನು ಕೂಡ ಉಮಾಪತಿ ಶೇರ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಅಭಿನಯಿಸಿದ್ದ ‘ರಾಬರ್ಟ್’ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಯಶಸ್ಸು ಕಂಡಿತ್ತು. ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ ಹೊರತಾಗಿಯೂ ಇಬ್ಬರ ಮಧ್ಯೆ ಜಗಳವಾಗಿತ್ತು. ‘ಕಾಟೇರ ಟೈಟಲ್ ಕೊಟ್ಟಿದ್ದು ನಾನು’ ಎಂದು ಉಮಾಪತಿ ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ದರ್ಶನ್, ವೇದಿಕೆ ಮೇಲೆಯೇ ಉಮಾಪತಿಗೆ ತಗಡು ಎಂಬ ಪದ ಬಳಕೆ ಮಾಡಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ದರ್ಶನ್ ಅವರ ಈ ಹೇಳಿಕೆಗೆ ಉಮಾಪತಿ ಅಂದು ಪ್ರತಿಕ್ರಿಯೆ ನೀಡಿ, ‘ಇವತ್ತು ನಾನು ತಗಡಿರಬಹುದು. ಮುಂದೊಂದು ದಿನ ನಾನು ಚಿನ್ನದ ತಗಡಾಗುತ್ತೇನೆ. ಸಮಯ ಸಂದರ್ಭ ಉತ್ತರ ಕೊಡುತ್ತದೆ. ಜೀವನ ಹೀಗೆಯೇ ಇರುವುದಿಲ್ಲ. ಮುಂದೊಂದು ದಿನ ಬೀಳುತ್ತದೆ’ ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದರು. ಈಗ ಅವರ ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿಗಳು ಅದನ್ನು ಶೇರ್ ಮಾಡುತ್ತಿದ್ದಾರೆ. ಉಮಾಪತಿ ಕೂಡ ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ನೀಡುತ್ತಿಲ್ಲ. ಆದರೆ, ಅಭಿಮಾನಿಗಳ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.