ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ (Aishwarya Sarja) ಹಾಗೂ ತಮಿಳು ನಟ ಉಮಾಪತಿ (Umapathy Ramaiah) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿ ಚೆನ್ನೈನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಸತಿ-ಪತಿಗಳಾಗಿದ್ದಾರೆ. ನಿನ್ನೆಯಷ್ಟೇ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಳ ಹಳದಿ ಮತ್ತು ಮೆಹಂದಿ ಶಾಸ್ತ್ರ ನಡೆದಿತ್ತು. ಈ ಸಂಭ್ರಮದಲ್ಲಿ ಪುತ್ರಿಗೆ ಅರ್ಜುನ್ ಸರ್ಜಾ ಮುತ್ತು ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಆರತಕ್ಷತೆಗೆ ನಟ ಜಗ್ಗೇಶ್ ಸೇರಿದಂತೆ ಅನೇಕರಿಗೆ ಆಮಂತ್ರಣ ನೀಡಲಾಗಿದೆ. ಐಶ್ವರ್ಯಾ ಹಾಗೂ ತಮಿಳು ನಟ ಉಮಾಪತಿ ರಾಮಯ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಎರಡು ಮನೆಯಲ್ಲಿ ಒಪ್ಪಿಗೆ ಪಡೆದು ಈಗ ಮದುವೆಯಾಗಿದ್ದಾರೆ. ಐಶ್ವರ್ಯಾ 2018ರಲ್ಲಿ `ಪ್ರೇಮ ಬರಹ’ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್ ಗೆ ನಾಯಕಿಯಾಗಿ ನಟಿಸಿದ್ದರು.
