T20 World Cup 2024ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ.
ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದಿದ್ದ ಇಂಗ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ನೀಡಿತು. ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ 5 ಓವರ್ ಗಳಲ್ಲಿ 70 ರನ್ ಗಳಿಸಿದರು.
ಡೇವಿಡ್ ವಾರ್ನರ್ (39) ಔಟಾದರು. ಮತ್ತೊಂದೆಡೆ ಟ್ರಾವಿಸ್ ಹೆಡ್ 34 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮಿಚೆಲ್ ಮಾರ್ಷ್ 35 ರನ್, ಗ್ಲೆನ್ ಮ್ಯಾಕ್ಸ್ವೆಲ್ 28, ಮಾರ್ಕಸ್ ಸ್ಟೋಯಿನಿಸ್ 30 ರನ್ ಗಳಿಸಿದರು. ಪರಿಣಾಮ ನಿಗದಿತ ಓವರ್ ಗಳಲ್ಲಿ ಆಸ್ಟ್ರೇಲಿಯಾ ತಂಡ 7 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು.
202 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೂ ಉತ್ತಮ ಆರಂಭ ಸಿಕ್ಕಿತ್ತು. ಮೊದಲ ವಿಕೆಟ್ ಗೆ 73 ರನ್ ಗಳ ಜೊತೆಯಾಟ ಒದಗಿ ಬಂದಿತ್ತು. ನಂತರ ಉಳಿದ ಬ್ಯಾಟ್ಸಮನ್ ಗಳು ಪ್ರತಿರೋಧ ಒಡ್ಡಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಆಸ್ಟ್ರೇಲಿಯಾ ತಂಡವು 36 ರನ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವು ಆಸ್ಟ್ರೇಲಿಯಾ ತಂಡಕ್ಕೆ ಅಗ್ರ ಸ್ಥಾನ ನೀಡಿತು. ಇಂಗ್ಲೆಂಡ್ ತಂಡವು ಬಿ ಗುಂಪಿನಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ.