ಬೆಂಗಳೂರು: ಬೆಂಗಳೂರು ಗ್ರಾಮಾಂತರ ಸೋಲಿನಿಂದ ಹೊರ ಬರಲು ಆಗುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಹಾಕಿದವರಿಗೆ ನನ್ನ ಕೃತಜ್ಞತೆ, ಆದರೆ, ಮತ ಹಾಕದವರ ಹೃದಯ ಗೆಲ್ಲಬೇಕಿದೆ. ಈ ಮಾತನ್ನು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ವಿರೋಧಿಗಳು ಒಳ್ಳೆಯ ಸ್ಟ್ರಾಟಜಿ ಮಾಡಿದ್ರು. ನಾನ್ ಕಾಂಟ್ರವರ್ಶಿಯಲ್ ಕ್ಯಾಂಡಿಡೇಟ್ ಹಾಕಿದರು. ನಾವು ಅತಿಯಾದ ಆತ್ಮವಿಶ್ವಾಸದಲ್ಲಿದ್ದೇವು. ಹೀಗಾಗಿ ಸೋಲುವಂತಾಯಿತು ಎಂದು ಹೇಳಿದ್ದಾರೆ.
ನಮಗೆ ಬರುವ ಮತಗಳು ಬಂದಿವೆ. ಅವರಿಗೆ ಒಂದೂವರೆ ಲಕ್ಷ ವೋಟು ಹೋಗಿದೆ. ಕನಕಪುರದಲ್ಲಿ 60 ಸಾವಿರ ವೋಟು ನಿರೀಕ್ಷೆ ಇತ್ತು. ಅಲ್ಲಿ 25 ಸಾವಿರ ಮತ ಮಾತ್ರ ಬಂದಿದೆ. ದೇವೇಗೌಡರು (HD Devegowda), ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬಸ್ಥರೂ ಸೋತಿದ್ದಾರೆ. ಹಾಗೆಯೇ ಸುರೇಶ್ ಸೋತಿದ್ದಾರೆ ಎಂದು ಹೇಳಿದ್ದಾರೆ.