ಬೆಂಗಳೂರು: ಪಾಪಿ ತಂದೆಯೊಬ್ಬ ಕುಡಿದ ಮತ್ತಿನಲ್ಲಿ ತನಗೆ ಹಣ ಕೊಟ್ಟವರೊಂದಿಗೆ ಮಲಗುವಂತೆ ಮಗಳಿಗೆ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದಲ್ಲಿ ನಡೆದಿದೆ. ಅಲ್ಲದೇ, ಪತ್ನಿ ಹಾಗೂ ಪುತ್ರಿಗೆ ಥಳಿಸಿ ಮನೆಯಿಂದ ಹೊರದಬ್ಬಿ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ಹೀಗಾಗಿ ತಾಯಿ ವಿಜಯಲಕ್ಷ್ಮೀ ಜೊತೆ ಮಗಳು ಮನೆ ಮುಂದೆ ಗೋಳಾಡುತ್ತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬೀಗ ಒಡೆದು ತಾಯಿ ಹಾಗೂ ಮಗಳನ್ನು ಮನೆಗೆ ಕಳುಹಿಸಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಸನ್ನಗಾಗಿ ಶೋಧ ಕಾರ್ಯ ನಡೆಸಿದ್ದಾರೆ.