ತಿರುವನಂತಪುರಂ: ಕೇರಳದಲ್ಲಿ ಖಾತೆ ತೆರೆಯಬೇಕೆನ್ನುವ ಬಿಜೆಪಿಯ ಕನಸು ನನಸಾಗಿದೆ. ಈ ಮೂಲಕ ಕೇರಳದಲ್ಲಿ ಮೊದಲ ಬಾರಿಗೆ ಕಮಲ ಅರಳಿ ನಿಂತಿದೆ.ಕೇರಳದ ತ್ರಿಶ್ಯೂರ್ ನಲ್ಲಿ (Thrissur) ಸುರೇಶ್ ಗೋಪಿ (Suresh Gopi) ಭರ್ಜರಿ ಜಯ ಸಾಧಿಸಿದ್ದಾರೆ.
ಅವರು 74 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಸುರೇಶ್ ಗೋಪಿ 4,09,302 ಮತಗಳನ್ನು ಪಡೆದಿದ್ದಾರೆ. ಅವರಿಗೆ ಪೈಪೋಟಿ ನೀಡಿದ್ದ ಸಿಪಿಐ ವಿಎಸ್ ಸುನಿಲ್ ಕುಮಾರ್ 3,34,462 ಮತಗಳನ್ನು ಪಡೆಯಲು ಯಶಸ್ವಿಯಿದ್ದಾರೆ. ಕಾಂಗ್ರೆಸ್‌ನ (Congress) ಕೆ ಮುರಳೀಧರನ್ 3,22,102 ಮತಗಳನ್ನು ಗಳಿಸಿದ್ದಾರೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪನ್ ಜಯಗಳಿಸಿದ್ದರು. ಆ ವೇಳೆ ಸುರೇಶ್ ಗೋಪಿ 2,93,822 ಮತಗಳನ್ನು ಗಳಿಸಿದ್ದರು. ಕೇರಳದಲ್ಲಿ ಹೇಗಾದರೂ ಮಾಡಿ ಬಿಜೆಪಿ ಗೆಲ್ಲಿಸಬೇಕೆಂದು ಪಣತೊಡಲಾಗಿತ್ತು. ಹೀಗಾಗಿಯೇ ಸುರೇಶ್ ಗೋಪಿ ಅವರಿಗೆ ಬಿಜೆಪಿ ರಾಜ್ಯಸಭಾ ಸ್ಥಾನಮಾನ ನೀಡಿತ್ತು. 2016 ರಿಂದ 2022ವರೆಗೆ ಸುರೇಶ್ ಗೋಪಿ ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿ, ಜನರಿಗೆ ಹತ್ತಿರವಾಗಿದ್ದರು. ಸದ್ಯ ಈ ಪ್ರಯತ್ನ ಬಿಜೆಪಿಗೆ ಫಲ ನೀಡಿದಂತಾಗಿದೆ.